
ಹೀರೆಕಾಯಿ ಮಿನೀಸ್
ಬೇಕಾಗುವ ಪದಾರ್ಥಗಳು..
- ಹೀರೆಕಾಯಿ 1
- ಕಡಲೆ ಹಿಟ್ಟು 1 ಬಟ್ಟಲು
- ಅಕ್ಕಿಹಿಟ್ಟು- ಎರಡು ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಅರಿಶಿಣದ ಪುಡಿ- ಸ್ವಲ್ಪ
- ಅಚ್ಚಖಾರದ ಪುಡಿ- ಒಂದು ಚಿಕ್ಕ ಚಮಚ
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ...
- ಕಡಲೆ ಹಿಟ್ಟು, ಅಕ್ಕಿಹಿಟ್ಟು, ಅಚ್ಚಖಾರದಪುಡಿ, ಅರಿಶಿನದ ಪುಡಿ ಹಾಗೂ ಉಪ್ಪು ಇವುಗಳನ್ನು ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಕಲೆಸಿಟ್ಟು ಕೊಳ್ಳಿ.
- ಹೀರೆಕಾಯಿಯ ಸಿಪ್ಪೆ ತೆಗೆದು ತೆಳ್ಳನೆಯ ಬಿಲ್ಲೆಗಳಾಗಿ ಕತ್ತರಿಸಿಕೊಳ್ಳಿ. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಿಸಿದ
- ಬಳಿಕ ಸಣ್ಣಗೆ ಕತ್ತರಿಸಿಕೊಂಡ ಹೀರೆಕಾಯಿಯನ್ನು ಹಿಟ್ಟಿನಲ್ಲಿ ಒಂದೊಂದಾಗಿ ಅದ್ದಿ ತೆಗೆದು ಎಣ್ಣೆಯಲ್ಲಿ ಕರಿಯಿರಿ. ಇದೀಗ ರುಚಿಕರವಾದ ಹೀರೇಕಾಯಿ ಮಿನೀಸ್ ಸವಿಯಲು ಸಿದ್ಧ.