ಬೇಬಿ ಕಾರ್ನ್ ರೋಸ್ಟ್

ರುಚಿಕರವಾದ ಬೇಬಿ ಕಾರ್ನ್ ರೋಸ್ಟ್ ಮಾಡುವ ವಿಧಾನ...
ಬೇಬಿ ಕಾರ್ನ್ ರೋಸ್ಟ್
ಬೇಬಿ ಕಾರ್ನ್ ರೋಸ್ಟ್

ಬೇಕಾಗುವ ಪದಾರ್ಥಗಳು...

  • ಬೇಬಿ ಕಾರ್ನ್ – 15-20
  • ಎಣ್ಣೆ – 2 ಚಮಚ
  • ಕರಿಬೇವಿನ ಎಲೆ – ಸ್ವಲ್ಪ
  • ಅರಿಶಿನ – ಅರ್ಧ ಚಮಚ
  • ಖಾರದಪುಡಿ- 1 ಚಮಚ
  • ಆಮ್ಚೂರ್ ಪುಡಿ – ಅರ್ಧ ಚಮಚ
  • ಗರಂ ಮಸಾಲೆ ಪುಡಿ – ಅರ್ಧ ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ಜೋಳದ ಹಿಟ್ಟು – 2 ಚಮಚ
  • ಚಾಟ್ ಮಸಾಲಾ ಪುಡಿ – ಕಾಲು ಚಮಚ
  • ಎಣ್ಣೆ – 4 ಚಮಚ

ಮಾಡುವ ವಿಧಾನ...

  • ಮೊದಲಿಗೆ ಬೇಬಿ ಕಾರ್ನ್ ಅನ್ನು ಚೆನ್ನಾಗಿ ತೊಳೆದು, ಕುಕ್ಕರ್‌ನಲ್ಲಿ ಹಾಕಿ, ಮುಳುಗುವಷ್ಟು ನೀರು ಸೇರಿಸಿ, ಮಧ್ಯಮ ಉರಿಯಲ್ಲಿ 2 ಕೂಗು ಕೂಗಿಸಿ ಬೇಯಿಸಿಕೊಳ್ಳಿ.
  • ಬಳಿಕ ಕುಕ್ಕರ್‌ನ ಮುಚ್ಚಳ ತೆಗೆದು, ನೀರನ್ನು ಬಸಿದುಕೊಂಡು, ಬೆಂದ ಬೇಬಿ ಕಾರ್ನ್ ಅನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
  • ಈಗ ಒಂದು ಪ್ಯಾನ್ ಅನ್ನು ತೆಗೆದುಕೊಂಡು, ಅದಕ್ಕೆ 2 ಚಮಚ ಎಣ್ಣೆ ಹಾಕಿ ಹಾಗೂ ಕರಿಬೇವಿನ ಎಲೆ ಸೇರಿಸಿ ಸಿಡಿಸಿ.
  • ಉರಿಯನ್ನು ಕಡಿಮೆ ಮಾಡಿ, ಅರಿಶಿನ, ಕೆಂಪು ಮೆಣಸಿನಪುಡಿ, ಆಮ್ಚೂರ್ ಪುಡಿ, ಉಪ್ಪು, ಗರಂ ಮಸಾಲೆ ಪುಡಿ ಸೇರಿಸಿ ಹುರಿಯಿರಿ.
  • ಈಗ ಕತ್ತರಿಸಿಟ್ಟುಕೊಂಡಿದ್ದ ಬೇಬಿ ಕಾರ್ನ್ ಅನ್ನು ಸೇರಿಸಿ ಮಿಶ್ರಣ ಮಾಡಿ.
  • ಬಳಿಕ ಜೋಳ ಹಿಟ್ಟನ್ನು ಸೇರಿಸಿ, 4 ಚಮಚ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ 10 ನಿಮಿಷ ಚೆನ್ನಾಗಿ ಫ್ರೈ ಮಾಡಿ.
  • ಕೊನೆಯಲ್ಲಿ ಚಾಟ್ ಮಸಾಲಾವನ್ನು ಸಿಂಪಡಿಸಿದರೆ, ರುಚಿಕರವಾದ ಬೇಬಿ ಕಾರ್ನ್ ರೋಸ್ಟ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com