ಬೆಂಡೆಕಾಯಿ ಪಾಪ್‌ಕಾರ್ನ್

ರುಚಿಕರವಾದ ಬೆಂಡೆಕಾಯಿ ಪಾಪ್‌ಕಾರ್ನ್ ಮಾಡುವ ವಿಧಾನ...
ಬೆಂಡೆಕಾಯಿ ಪಾಪ್‌ಕಾರ್ನ್
ಬೆಂಡೆಕಾಯಿ ಪಾಪ್‌ಕಾರ್ನ್

ಬೇಕಾಗುವ ಪದಾರ್ಥಗಳು...

  • ಬೆಂಡೆಕಾಯಿ- 15-20
  • ಅರಿಶಿಣದ ಪುಡಿ- ಅರ್ಧ ಚಮಚ
  • ಅಚ್ಚ ಖಾರದಪುಡಿ- 2 ಚಮಚ
  • ಆಮ್ಚೂರ್ ಪುಡಿ- 1 ಚಮಚ
  • ಗರಂ ಮಸಾಲೆ ಪುಡಿ- ಅರ್ಧ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಕಾರ್ನ್ ಫ್ಲೋರ್- 1 ಚಮಚ
  • ಮೈದಾ ಹಿಟ್ಟು- 1 ಬಟ್ಟಲು
  • ಬ್ರೆಡ್ ಕ್ರಂಬ್ಸ್- 1-2 ಬಟ್ಟಲು
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಬೆಂಡೆಕಾಯಿಯನ್ನು 1 ಇಂಚು ಉದ್ದಕ್ಕೆ ಕತ್ತರಿಸಿ. ನೀರು ಇಲ್ಲದಂತೆ ಚೆನ್ನಾಗಿ ಒರೆಸಿಕೊಳ್ಳಿ. ಬಳಿಕ ಅರಿಶಿನ, 1 ಚಮಚ ಖಾರದ ಪುಡಿ, ಆಮ್ಚುರ್ ರುಚಿ, ಗರಂ ಮಸಾಲಾ, ರುಚಿಕೆ ತಕ್ಕಷ್ಟು ಉಪ್ಪು, 2 ಚಮಚ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ 15 ನಿಮಿಷ ಮಸಾಲೆ ಹಿಡಿಯಲು ಬಿಡಿ.
  • ನಂತರ ಒಂದು ಬಟ್ಟಲು ತೆಗೆದುಕೊಂಡು 1 ಕಪ್ ಮೈದಾ, ಮುಕ್ಕಾಲು ಬಟ್ಟಲು ಕಪ್ ಕಾರ್ನ್ ಫ್ಲೋರ್, 1 ಚಮಚ ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಹಾಕಿ ಉಂಡೆಗಳಿಲ್ಲದಂತೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಬಳಿಕ ಮಸಾಲೆ ಮಿಶ್ರಿತ ಬೆಂಡೆಕಾರಿಗಳನ್ನು ಅದ್ದಿ ತೆಗೆದು, ಬ್ರೆಡ್ ಕ್ರಂಬ್ಸ್ ನಲ್ಲಿ ಹಾಕಿ ರೋಲ್ ಮಾಡಿ. ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ.
  • ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಿ. ಕಾದ ನಂತರ ಈ ಬೆಂಡೆಕಾಯಿಗಳನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಬೆಂಡೆಕಾಯಿ ಪಾಪ್ ಕಾರ್ನ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com