ಅವಲಕ್ಕಿ ಕಟ್ಲೆಟ್

ರುಚಿಕರವಾದ ಅವಲಕ್ಕಿ ಕಟ್ಲೆಟ್ ಮಾಡುವ ವಿಧಾನ...
ಅವಲಕ್ಕಿ ಕಟ್ಲೆಟ್
ಅವಲಕ್ಕಿ ಕಟ್ಲೆಟ್

ಬೇಕಾಗುವ ಪದಾರ್ಥಗಳು...

  • ತೆಳುವಾದ ಅವಲಕ್ಕಿ- 1 ಬಟ್ಟಲು
  • ಆಲೂಗಡ್ಡೆ (ಬೇಯಿಸಿದ್ದು)- 2
  • ಅರಿಶಿನದ ಪುಡಿ- ಕಾಲು ಚಮಚ
  • ಖಾರದ ಪುಡಿ- ಕಾಲು ಚಮಚ
  • ಗರಂ ಮಸಾಲ- ಕಾಲು ಚಮಚ
  • ಆಮ್ ಚೂರ್ ಪುಡಿ- ಕಾಲು ಚಮಚ
  • ಚಾಟ್ ಮಸಾಲ- ಕಾಲು ಚಮಚ
  • ಶುಂಠಿ, ಬೆಳ್ಳುಳ್ಳಿ- ಪೇಸ್ಟ್ ಸ್ವಲ್ಪ
  • ಕಾಳು ಮೆಣಸಿನ ಪುಡಿ- ಕಾಲು ಚಮಚ
  • ಕಾರ್ನ್‌ ಫ್ಲೋರ್‌- 3 ಚಮಚ
  • ಬ್ರೆಡ್ ಕ್ರಂಬ್ಸ್-3 ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಮೈದಾ ಹಿಟ್ಟು- ಒಂದು ಚಮಚ
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ತೆಳು ಅವಲಕ್ಕಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆದ ತಕ್ಷಣವೇ ಒಂದು ಅಗಲವಾದ ಪಾತ್ರೆಗೆ ಹಾಕಿಕೊಳ್ಳಬೇಕು.
  • ಅದೇ ಪಾತ್ರೆಗೆ ಎರಡು ಬೇಯಿಸಿದ ಆಲೂಗಡ್ಡೆ, ಅರಿಶಿನ, ಖಾರದ ಪುಡಿ, ಗರಂ ಮಸಾಲ, ಆಮ್ ಚೂರ್ ಪುಡಿ (ಮಾವಿನಹಣ್ಣಿನ ಪುಡಿ), ಚಾಟ್ ಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
  • ನೀರು ಹಾಕದಂತೆ ಚಪಾತಿ ಹಿಟ್ಟಿನ ಹದಕ್ಕಿಂತ ಕಡಿಮೆ ಹದದಲ್ಲಿ ಕಲೆಸಿಕೊಳ್ಳಬೇಕು.
  • ಮತ್ತೊಂದು ಪಾತ್ರೆಗೆ ಕಾರ್ನ್ ಫ್ಲೋರ್, ಮೈದಾಹಿಟ್ಟು, ಮೆಣಸಿನ ಪುಡಿ, ಉಪ್ಪು, ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿಕೊಳ್ಳಬೇಕು.
  • ಇದೇ ಮಿಶ್ರಣಕ್ಕೆ ಈ ಹಿಂದೆ ಮಾಡಿದ್ದ ಮಿಶ್ರಣವನ್ನು ದಪ್ಪವಾಗಿ ಚಪ್ಪಟೆ ಆಕಾರದಲ್ಲಿ ಮಾಡಿ ಹಾಕಬೇಕು. ತಕ್ಷಣವೇ ತೆಗೆದು ಬ್ರೆಡ್ ಪುಡಿಯೊಳಗೆ ಅದ್ದಿ ಸ್ವಲ್ಪವೇ ಎಣ್ಣೆ ಹಾಕಿಕೊಂಡು ಬಂಗಾರದ ಬಣ್ಣ ಬರುವವರೆಗೆ ಕರಿದುಕೊಂಡರೆ ರುಚಿಕರವಾದ ಅವಲಕ್ಕಿ ಕಟ್ಲೆಟ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com