ಮಲಾಯಿ ಲಡ್ಡು

ರುಚಿಕರವಾದ ಮಲಾಯಿ ಲಡ್ಡು ಮಾಡುವ ವಿಧಾನ...
ಮಲಾಯಿ ಲಡ್ಡು
ಮಲಾಯಿ ಲಡ್ಡು

ಬೇಕಾಗುವ ಪದಾರ್ಥಗಳು...

  • ಪನೀರ್ – 200 ಗ್ರಾಂ
  • ಕಂಡೆನ್ಸ್‌ಡ್ ಮಿಲ್ಕ್ – ಮುಕ್ಕಾಲು ಬಟ್ಟಲು
  • ಕುದಿಸಿದ ಹಾಲು – ಕಾಲು ಬಟ್ಟಲು
  • ಸಕ್ಕರೆ – 1 ಚಮಚ
  • ತುಪ್ಪ – ಅಗತ್ಯಕ್ಕೆ ತಕ್ಕಂತೆ
  • ಏಲಕ್ಕಿ – 2
  • ರೋಸ್ ಎಸೆನ್ಸ್ – 2 ಹನಿ
  • ಕೇಸರಿ – ಸ್ವಲ್ಪ
  • ಕತ್ತರಿಸಿದ ಪಿಸ್ತಾ – ಅಲಂಕಾರಕ್ಕೆ ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ, ಅದರಲ್ಲಿ ಪನೀರ್ ಅನ್ನು ಸುಮಾರು 10-15 ನಿಮಿಷಗಳ ವರೆಗೆ ಇರಿಸಿ. ಇದರಿಂದ ಪನೀರ್ ಮೃದುವಾಗುತ್ತದೆ.
  • ಬಳಿಕ ಪನೀರ್ ಅನ್ನು ನೀರಿನಿಂದ ತೆಗೆದು, ಕೈಗಳಿಂದಲೇ ಪುಡಿ ಮಾಡಿಕೊಳ್ಳಿ. ಈಗ ಪನೀರ್ ಅನ್ನು ಮಿಕ್ಸರ್ ಜಾರ್‌ಗೆ ಹಾಕಿ, ಅದಕ್ಕೆ ಕುದಿಸಿ ಆರಿಸಿದ ಹಾಲು, ಕಂಡೆನ್ಸ್‌ಡ್ ಮಿಲ್ಕ್, ಕೇಸರಿ, ಏಲಕ್ಕಿ, ಸಕ್ಕರೆ ಹಾಗೂ ರೋಸ್ ಎಸೆನ್ಸ್ ಅನ್ನು ಸೇರಿಸಿ ರುಬ್ಬಿಕೊಳ್ಳಿ.
  • ಈಗ ಕಡಿದ ಮಿಶ್ರಣವನ್ನು ಒಂದು ಪ್ಯಾನ್‌ಗೆ ಹಾಕಿ ಕುದಿಸಿ, ಉರಿಯನ್ನು ಮಧ್ಯಮದಲ್ಲಿಟ್ಟು ಕೈಯಾಡಿಸುತ್ತಾ ಮಿಶ್ರಣ ದಪ್ಪಗಾಗಲು ಬಿಡಿ.
  • ಮಿಶ್ರಣ ಪ್ಯಾನ್ ಅನ್ನು ಬಿಟ್ಟು ಮುದ್ದೆಯಂತಾದಾಗ ಉರಿಯನ್ನು ಆಫ್ ಮಾಡಿ, ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ.
  • ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಕೈಗಳಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿ.
  • ಪ್ರತಿ ಉಂಡೆಗಳಿಗೂ ಕತ್ತರಿಸಿದ ಪಿಸ್ತಾವನ್ನು ಇಟ್ಟು ಅಲಂಕರಿಸಿದರೆ ರುಚಿಕರವಾದ ಮಲಾಯಿ ಲಡ್ಡು ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com