ಚಿಕನ್ ಪಕೋಡ

ರುಚಿಕರವಾದ ಚಿಕನ್ ಪಕೋಡ ಮಾಡುವ ವಿಧಾನ...
ಚಿಕನ್ ಪಕೋಡ
ಚಿಕನ್ ಪಕೋಡ

ಬೇಕಾಗುವ ಪದಾರ್ಥಗಳು...

  • ಚಿಕನ್ ಕೈಮಾ – 250 ಗ್ರಾಂ
  • ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಶುಂಠಿ ಪೇಸ್ಟ್ – 1 ಚಮಚ
  • ಕಾಳು ಮೆಣಸಿನ ಪುಡಿ – ಕಾಲು ಚಮಚ
  • ಅಚ್ಚ ಖಾರದ ಪುಡಿ – ಕಾಲು ಚಮಚ
  • ಉಪ್ಪು – ಕಾಲು ಚಮಚ
  • ಗರಂ ಮಸಾಲೆ ಪುಡಿ – ಅರ್ಧ ಚಮಚ
  • ದನಿಯಾ ಪುಡಿ – 1 ಚಮಚ
  • ನಿಂಬೆ ರಸ – ಸ್ವಲ್ಪ
  • ಕಡಲೆ ಹಿಟ್ಟು – 2 ಚಮಚ
  • ಮೈದಾ ಹಿಟ್ಟು – 2 ಚಮಚ
  • ಉಪ್ಪು – ಕಾಲು ಚಮಚ
  • ಎಣ್ಣೆ – ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಅನ್ನು ತೆಗೆದುಕೊಂಡು, ಅದಕ್ಕೆ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
  • ಈಗ ಕಾಳು ಮೆಣಸಿನ ಪುಡಿ, ಅಚ್ಚ ಖಾರದ ಪುಡಿ, ಉಪ್ಪು, ಗರಂ ಮಸಾಲೆ, ದನಿಯಾ ಪುಡಿ, ನಿಂಬೆ ರಸ ಹಾಕಿ ಮಿಶ್ರಣ ಮಾಡಿ. ಮಸಾಲೆ ಮಿಶ್ರಿತ ಚಿಕನ್ 1 ಗಂಟೆಗಳ ಕಾಲ ನೆನೆಯಲು ಬಿಡಿ.
  • ಈ ನಡುವೆ ಮತ್ತೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಮೈದಾ ಹಿಟ್ಟು, ಖಾರದ ಪುಡಿ ಹಾಗೂ ಉಪ್ಪು ಹಾಕಿ, ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
  • ಈಗಾಗಲೇ 1 ಗಂಟೆ ಕಾಲ ನೆನೆಸಿದ ಚಿಕನ್ ತೆಗೆದುಕೊಂದು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.
  • ಈಗ ಡೀಪ್ ಫ್ರೈಗೆ ಕಡಾಯಿಯಲ್ಲಿ ಎಣ್ಣೆ ಹಾಕಿ, ಬಿಸಿ ಮಾಡಿ. ಚಿಕನ್ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು, ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಎಣ್ಣೆಯಲ್ಲಿ ಬಿಟ್ಟು ಕರಿಯಿರಿ.
  • ಚಿಕನ್ ಚೆನ್ನಾಗಿ ಬೆಂದು, ಪಕೋಡಾ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯು ಪೇಪರ್ ಮೇಲೆ ಹರಡಿ.
  • ಇದೀಗ ರುಚಿಕರವಾದ ಚಿಕನ್ ಪಕೋಡಾ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com