ಬ್ರೊಕೋಲಿ ಸೂಪ್

ರುಚಿಕರವಾದ ಬ್ರೊಕೋಲಿ ಸೂಪ್ ಮಾಡುವ ವಿಧಾನ...
ಬ್ರೊಕೋಲಿ ಸೂಪ್
ಬ್ರೊಕೋಲಿ ಸೂಪ್

ಬೇಕಾಗುವ ಸಾಮಾಗ್ರಿಗಳು...

  • ಬ್ರೊಕೋಲಿ- 1
  • ಈರುಳ್ಳಿ- 1
  • ಬೆಳ್ಳುಳ್ಳಿ- 4-5 ಎಸಳು
  • ದೊಡ್ಡಪತ್ರೆ- 1 ಚಮಚ
  • ಹಾಲು- ಅರ್ಧ ಬಟ್ಟಲು
  • ಬೆಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಉಪ್ಪು- ರುಚಿಗೆ ತಕ್ಕಷ್ಟು
  • ಕಾಳುಮೆಣಸಿನ ಪುಡಿ- ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ...

  • ಒಂದು ಬಾಣಲೆಯಲ್ಲಿ ಬ್ರೊಕೋಲಿ ಜೊತೆಗೆ, ಬೆಳ್ಳುಳ್ಳಿ ಮತ್ತು ಒಂದು ಚಿಟಿಕೆ ಉಪ್ಪನ್ನು ಸೇರಿಸಿ. 5-10 ನಿಮಿಷಗಳ ಕಾಲ ಹಾಗೆಯೇ ಕುದಿಯಲು ಬಿಡಿ. ಅನಂತರದಲ್ಲಿ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.
  • ಬಾಣಲೆಯಲ್ಲಿ ಬೆಣ್ಣೆ, ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಎರಡರಿಂದ ಮೂರು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಈ ಮಿಶ್ರಣವು ತಣ್ಣಗಾದ ನಂತರ ಬೇಯಿಸಿದ ಬ್ರೊಕೋಲಿ ಮತ್ತು ಇತರ ಪದಾರ್ಥಗಳೊಂದಿಗೆ ಅದನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.
  • ರುಬ್ಬಿಕೊಂಡ ಬ್ರೊಕೋಲಿಯನ್ನು ಬಾಣಲೆಗೆ ಹಾಕಿ ಪ್ಯೂರಿ ರೀತಿ ಆಗುವಂತೆ ಕೈಯಾಡಿಸಿ. ಬಳಿಕ ಸ್ವಲ್ಪ ಪ್ರಮಾಣದ ಹಾಲನ್ನು ಸೇರಿಸಿ, ಮಧ್ಯಮ ಉರಿಯಲ್ಲಿ ನಯವಾಗಿ ಬೇಯಿಸಿಕೊಳ್ಳಬೇಕು.
  • ನಂತರ ಸ್ವಲ್ಪ ದೊಡ್ಡಪತ್ರೆ ಜೊತೆಗೆ ಉಪ್ಪು ಮತ್ತು ಮೆಣಸು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಾಲ್ಕರಿಂದ ಐದು ನಿಮಿಷಗಳವರೆಗೆ ಚೆನ್ನಾಗಿ ಬೇಯಿಸಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com