
ಡ್ರೈಫ್ರೂಟ್ಸ್ ಪ್ಯೂರಿ
ಬೇಕಾಗುವ ಪದಾರ್ಥಗಳು...
- ಬಾದಾಮಿ- ಸ್ವಲ್ಪ
- ಗೋಡಂಬಿ- ಸ್ವಲ್ಪ
- ವಾಲ್‌ನಟ್- ಸ್ವಲ್ಪ
- ಪಿಸ್ತಾ- ಸ್ವಲ್ಪ
- ಕಡಲೇಕಾಯಿ-ಸ್ವಲ್ಪ
- ಕುಂಬಳಕಾಯಿ ಬೀಜ- ಸ್ವಲ್ಪ
- ಖರ್ಜೂರ- ಸ್ವಲ್ಪ
- ಅಂಜೂರ- ಸ್ವಲ್ಪ
- ಒಣ ದ್ರಾಕ್ಷಿ- ಸ್ವಲ್ಪ
ಮಾಡುವ ವಿಧಾನ...
- ಮೇಲಿನ ಎಲ್ಲಾ ಡ್ರೈಫ್ರೂಟ್ಸ್ ಗಳನ್ನು ರಾತ್ರಿಯೇ ನೆನೆಹಾಕಿ ಬೆಳಿಗ್ಗೆ ಹಬ್ಬೆಯಲ್ಲಿ ಬೇಯಿಸಿಕೊಳ್ಳಿ. ಇದಕ್ಕೆ ಹಣ್ಣುಗಳನ್ನು ಸೇರಿಕೊಡಬಹುದು.
- ಹೆಚ್ಚು ಪೋಷಕಾಂಶವಿರುವ ಕಾರಣ ಕೆಲವು ಇದು ಮಕ್ಕಳಿಗೆ ಜೀರ್ಣವಾಗದಿರಬಹುದು. ಹೀಗಾಗಿ ಆರಂಭಿಕ ದಿನಗಳಲ್ಲಿ ಮಕ್ಕಳಿಗೆ ಒಂದು ಚಮಚ ಪ್ಯೂರಿ ತಿನ್ನಿಸಲು ಆರಂಭಿಸಿ ನಂತರ ನಿಧಾನವಾಗಿ ಒಂದು ಬಟ್ಟಲವರೆಗೆ ತಿನ್ನಿಸಬಹುದು.