ಮಶ್ರೂಮ್ ಬಿರಿಯಾನಿ

ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ...
ಮಶ್ರೂಮ್ ಬಿರಿಯಾನಿ
ಮಶ್ರೂಮ್ ಬಿರಿಯಾನಿ

ಬೇಕಾಗುವ ಪದಾರ್ಥಗಳು

  • ಅಕ್ಕಿ- 1 ಬಟ್ಟಲು
  • ಮಶ್ರೂಮ್ - 150 ಗ್ರಾಂ
  • ಬಟಾಣಿ - 1 ಬಟ್ಟಲು
  • ಪುದೀನಾ ಸೊಪ್ಪು- ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಈರುಳ್ಳಿ- 1
  • ಟೊಮೆಟೋ -2
  • ಅಡುಗೆ ಎಣ್ಣೆ- ಸ್ವಲ್ಪ
  • ತುಪ್ಪ- ಸ್ವಲ್ಪ
  • ನಿಂಬೆ ಹಣ್ಣು- ಅರ್ಧ
  • ಮೊಸರು- 1 ಬಟ್ಟಲು
  • ಹಸಿ ಮೆಣಸಿನಕಾಯಿ- 2-3
  • ಚಕ್ಕೆ, ಲವಂಗ, ಏಲಕ್ಕಿ- ಸ್ವಲ್ಪ
  • ಕಸೂರಿ ಮೇಥಿ- ಸ್ವಲ್ಪ
  • ಖಾರದ ಪುಡಿ- 1 ಚಮಚ
  • ಗರಂ ಮಸಾಲೆ- ಕಾಲು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ
  • ದನಿಯಾ ಪುಡಿ- ಅರ್ಧ ಚಮಚ

ಮಾಡುವ ವಿಧಾನ...

  • ಮೊದಲು ಒಲೆಯ ಮೇಲೆ ಒಂದು ಕುಕ್ಕರ್​ ಇಟ್ಟು ಅಡುಗೆ ಎಣ್ಣೆ ಹಾಕಿ. ಅದು ಕಾದ ಮೇಲೆ ಸ್ವಲ್ಪ ಎಣ್ಣೆ, ಸ್ವಲ್ಪ ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಕಸೂರಿ ಮೇಥಿ, ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
  • ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನಾ ಸೊಪ್ಪು, ಟೊಮೆಟೋ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಗರಂ ಮಸಾಲೆ, ದನಿಯಾ ಪುಡಿ, ಮಶ್ರೂಮ್, ಬಟಾಣಿ ಹಾಕಿ ಫ್ರೈ ಮಾಡಿ.
  • ನಂತರ ಉಪ್ಪು, ಮೊಸರು, ನೆನೆಸಿದ ಅಕ್ಕಿ ಅಳತೆ ನೀರು, ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ,
  • ಕುಕ್ಕರ್​ ಮುಚ್ಚಳ ಮುಚ್ಚಿ 1 ವಿಜಿಲ್​ ಬರಬೇಕು. ಈಗ ರುಚಿಕರವಾದ ಮಶ್ರೂಮ್​ ಬಿರಿಯಾನಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com