
ಪನೀರ್ ಎಗ್ ಗ್ರೇವಿ
ಬೇಕಾಗುವ ಪದಾರ್ಥಗಳು...
- ಮೊಟ್ಟೆ- ಬೇಯಿಸಿದ್ದು 6
- ಈರುಳ್ಳಿ – ಹೆಚ್ಚಿದ್ದು 1
- ಟೊಮೆಟೋ ಪೇಸ್ಟ್ - 1 ಬಟ್ಟಲು (3)
- ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚ್ಚ
- ಹಸಿ ಮೆಣಸಿನ ಕಾಯಿ – 2
- ಕೊತ್ತಂಬರಿ ಸೊಪ್ಪು – ಹೆಚ್ಚಿಕೊಂಡಿದ್ದು ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
- ಅಚ್ಚ ಖಾರದ ಪುಡಿ – 1 ಚಮಚ
- ಅರಿಶಿನ ಪುಡಿ – ಅರ್ಧ ಚಮಚ
- ಗರಂ ಮಸಾಲ ಪುಡಿ – 1 ಚಮಚ
- ಎಣ್ಣೆ – 2 ಚಮಚ
- ಬೇಯಿಸಿದ ಬಟಾಣಿ – 1 ಬಟ್ಟಲು
- ಪನೀರ್ – 250 ಗ್ರಾಂ
ಮಾಡುವ ವಿಧಾನ...
- ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿ ಪನೀರ್ ಅನ್ನು ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿದುಕೊಳ್ಳಿ. ಬಳಿಕ ಒಂದು ಪಾತ್ರೆಗೆ ಹಾಕಿ ಪಕ್ಕಕ್ಕಿಡಿ.
- ಇದೇ ಬಾಣಲೆಗೆ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಫ್ರೈ ಮಾಡಿ.
- ಬಳಿಕ ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಪೇಸ್ಟ್ ಹಾಗೂ ಉಪ್ಪು ಹಾಕಿ
- ನಂತರ ಅಚ್ಚ ಖಾರದ ಪುಡಿ, ಅರಿಶಿನ, ಗರಂ ಮಸಾಲ ಪುಡಿ ಹಾಕಿ ಮಿಶ್ರಣ ಮಾಡಿ. 2 ನಿಮಿಷ ಕೈಯಾಡಿಸಿ. ಬಳಿಕ 1 ಬಟ್ಟಲು ನೀರು ಸೇರಿಸಿ ಗ್ರೇವಿ ಹದಕ್ಕೆ ಬರಲು ಬಿಡಿ.
- ಬಳಿಕ ಬಟಾಣಿ, ಮೊಟ್ಟೆ ಹಾಗೂ ಪನ್ನೀರ್ ಸೇರಿಸಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ. ಈಗ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿಕರವಾದ ಪನೀರ್ ಎಗ್ ಗ್ರೇವಿ ಸವಿಯಲು ಸಿದ್ಧ.