
ನೆಲ್ಲಿಕಾಯಿ ಚಟ್ನಿ
ಬೇಕಾಗುವ ಪದಾರ್ಥಗಳು...
- ಎಣ್ಣೆ- 3 ಚಮಚ
- ಸಾಸಿವೆ- 1 ಚಮಚ
- ಇಂಗು- ಚಿಟಿಕೆ
- ಜೀರಿಗೆ- 1 ಚಮಚ
- ಮೆಂತ್ಯೆ- ಕಾಲು ಚಮಚ
- ಕಡಲೆಬೇಳೆ- 1 ಚಮಚ
- ಉದ್ದಿನ ಬೇಳೆ- 1 ಚಮಚ
- ಖಾರದ ಮೆಣಸಿನ ಕಾಯಿ- 5-6
- ಹಸಿ ಮೆಣಸಿನ ಕಾಯಿ -3
- ಕರಿಬೇವು- ಸ್ವಲ್ಪ
- ನೆಲ್ಲಿಕಾಯಿ- ಕಾಲು ಕೆಜಿ
- ಉಪ್ಪು- ರುಚಿಗೆ ತಕ್ಕಷ್ಟು
- ಅರಿಶಿಣದ ಪುಡಿ- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಬೆಲ್ಲ- ಸ್ವಲ್ಪ
ಮಾಡುವ ವಿಧಾನ...
- ಮೊದಲಿಗೆ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ. ಕಾದ ನಂತರ ಸಾಸಿವೆ ಹಾಕಿ. ಇದು ಕೆಂಪಗಾದ ಬಳಿಕ ಜೀರಿಗೆ, ಮೆಂತ್ಯೆ, ಇಂಗು, ಕಡಲೆಬೇಳೆ, ಉದ್ದಿನ ಬೇಳೆ ಹಾಕಿ ಕೆಂಪಗೆ ಹುರಿದುಕೊಳ್ಳಿ.
- ನಂತರ ಖಾರದ ಮೆಣಸಿನ ಕಾಯಿ, ಹಸಿ ಮೆಣಸಿನ ಕಾಯಿ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಚೆನ್ನಾಗಿ ತೊಳೆದು, ಬೀಜ ತೆಗೆದು ಕತ್ತರಿಸಿಕೊಂಡ ನೆಲ್ಲಿಕಾಯಿ, ಉಪ್ಪು, ಅರಿಶಿಣದ ಪುಡಿ ಹಾಕಿ 8-10 ನಿಮಿಷ ಸಣ್ಣ ಉರಿಯಲ್ಲಿ ನೆಲ್ಲಿಕಾಯಿ ಬೇಯಲು ಬಿಡಿ. ಆಗಾಗೆ ಕೈಯಾಡಿಸುತ್ತಿರಿ.
- ನಂತರ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ಹುರಿದ ಮಿಶ್ರಣವನ್ನು ಮಿಕ್ಸಿ ಜಾರ್'ಗೆ ಹಾಕಿ, ನಂತರ ಸ್ವಲ್ಪ ಬೆಲ್ಲವನ್ನೂ ಸೇರಿಸಿ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಂಡರೆ ರುಚಿಕರವಾದ ಬೆಟ್ಟದ ನೆಲ್ಲಿಕಾಯಿ ಚಟ್ನಿ ಸವಿಯಲು ಸಿದ್ಧ.