ಆಲೂ ಚಿಲ್ಲಿ

ರುಚಿಕರವಾದ ಆಲೂ ಚಿಲ್ಲಿ ಮಾಡುವ ವಿಧಾನ...
ಆಲೂ ಚಿಲ್ಲಿ
ಆಲೂ ಚಿಲ್ಲಿ

ಬೇಕಾಗುವ ಪದಾರ್ಥಗಳು...

  • ಆಲೂಗಡ್ಡೆ- 2-3
  • ಶುಂಠಿ- ಸ್ವಲ್ಪ
  • ಬೆಳ್ಳುಳ್ಳಿ- ಸ್ವಲ್ಪ
  • ಕ್ಯಾಪ್ಸಿಕಂ-2
  • ಈರುಳ್ಳಿ- 1
  • ಹಸಿಮೆಣಸಿನ ಕಾಯಿ-2-3
  • ಉಪ್ಪು- ರುಚಿಗೆ ತಕ್ಕಷ್ಟು
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
  • ಬ್ಯಾಡಗಿ ಚಿಲ್ಲಿ ಪೌಡರ್- 2 ಚಮಚ
  • ಕಾರ್ನ್ ಫ್ಲೋರ್- 1 ಬಟ್ಟಲು
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ರೆಡ್ಡಿ ಚಿಲ್ಲಿ ಸಾಸ್- 1 ಚಮಚ
  • ಸೋಸಾ ಸಾಸ್- ಅರ್ಧ ಚಮಚ
  • ಟೊಮೆಟೋ ಸಾಸ್- 1 ಚಮಚ
  • ಬಿಳಿ ಎಳ್ಳು- ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸ್ಟಿಕ್ ಗಳಂತೆ ಆಲೂಗಡ್ಡೆಯನ್ನು ಕತ್ತರಿಸಿಕೊಳ್ಳಿ. ನಂತರ ಸ್ಟಾರ್ಚ್ ಹೋಗುವವರೆ ಚೆನ್ನಾಗಿ ತೊಳೆದುಕೊಳ್ಳಿ.
  • ಬಳಿಕ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಕ್ಯಾಪ್ಸಿಕಂ, ಈರುಳ್ಳಿಯನ್ನು ಉದ್ದುದ್ದಕ್ಕೆ ಸ್ಟಿಕ್ ಗಳಂತೆ ಕತ್ತರಿಸಿಕೊಳ್ಳಿ.
  • ಒಂದು ಪಾತ್ರೆಗೆ ತೊಳೆದಿಟ್ಟುಕೊಂಡ ಆಲೂಗಡ್ಡೆ ಸ್ಟಿಕ್, ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಬ್ಯಾಡಗಿ ಚಿಲ್ಲಿ ಪೌಂಡರ್ 1 ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಆಲೂಗಡ್ಡೆಯಲ್ಲಿ ಈಗಾಗಲೇ ನೀರಿನ ಅಂಶ ಇರುವುದರಿಂದ ಹೆಚ್ಚಿನ ನೀರು ಹಾಕುವುದು ಬೇಡ, ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಆದಕ್ಕೆ ಎಣ್ಣೆ ಹಾಕಿ. ಕಾದ ನಂತರ ಆಲೂ ಸ್ಟಿಕ್ ಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಒಂದು ಬಾರಿ ಫ್ರೈ ಮಾಡಿದ ಬಳಿಕ ಅದನ್ನು ತೆಗೆದು ತಣ್ಣಗಾಗಲು ಬಿಡಿ. ನಂತರ ಎರಡನೇ ಬಾರಿ ಆಲೂ ಸ್ಟಿಕ್ ಗಳನ್ನು ಹಾಕಿ ಗರಿಗರಿಯಾಗುವವರೆ ಬಿಟ್ಟು, ತಟ್ಟೆಯೊಂದರಲ್ಲಿ ತೆಗೆದಿಟ್ಟುಕೊಳ್ಳಿ.
  • ಮತ್ತೊಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ನಂತರ ಈಗಾಗಲೇ ಸಣ್ಣಗೆ ಕತ್ತರಿಸಿಕೊಂಡ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಕ್ಯಾಪ್ಸಿಕಂ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಸ್ವಲ್ಪ ಉಪ್ಪು, ಸೋಸಾ ಸಾಸ್, ಚಿಲ್ಲಿ ಸಾಸ್, ಟೊಮೆಟೋ ಸಾಸ್ ಹಾಕಿ ಮಿಶ್ರಣ ಮಾಡಿ. ನಂತರ ಗ್ರೇವಿ ಗಟ್ಟಿಯಾಗಲು ಬಿಡಿ. ಬಳಿಕ ಈಗಾಗಲೇ ಫ್ರೈ ಮಾಡಿಕೊಂಡ ಆಲೂ ಸ್ಟಿಕ್ ಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ ಬಿಳಿ ಎಳ್ಳು ಹಾಕಿ ಅಲಂಕರಿಸಿದರೆ ರುಚಿಕರವಾದ ಆಲೂ ಚಿಲ್ಲಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com