
ಸ್ಪೈಸಿ ರೆಡ್ ಚಿಲ್ಲಿ ಚಿಕನ್
ಬೇಕಾಗುವ ಪದಾರ್ಥಗಳು...
- ಚಿಕನ್ - ಅರ್ಧ ಕೆಜಿ
- ಉಪ್ಪು- ರುಚಿಗೆ ತಕ್ಕಷ್ಟು
- ಅರಿಶಿಣ ಪುಡಿ- ಸ್ವಲ್ಪ
- ಸೋಯಾ ಸಾಸ್ - ಕಾಲು ಚಮಚ
- ವಿನೇಗರ್- 2 ಚಮಚ
- ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
- ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 5-6
- ಈರುಳ್ಳಿ- 4-5 (ಉದ್ದಕ್ಕೆ ಹೆಚ್ಚಿದ್ದು)
- ಅಚ್ಚ ಖಾರದ ಪುಡಿ- 2 ಚಮಚ
- ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಮಾಡುವ ವಿಧಾನ...
- ಮೊದಲಿಗೆ ಒಂದು ಪಾತ್ರೆಯಲ್ಲಿ ಚೆನ್ನಾಗಿ ತೊಳೆದುಕೊಂಡ ಚಿಕನ್ ಪೀಸ್, ಉಪ್ಪು, ವಿನೇಗರ್, ಅರಿಶಿಣದ ಪುಡಿ, ಸೋಯಾ ಸಾಸ್ ನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪಾತ್ರೆಯನ್ನು ಒಲೆಯ ಮೇಲಿಟ್ಟು, ಚಿಕನ್ ಬೇಯಲು ಬಿಡಿ.
- ಮತ್ತೊಂದು ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ಸ್ವಲ್ಪ ಹಾಕಿ. ಕಾದ ನಂತರ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹಾಕಿ 2 ನಿಮಿಷ ಹುರಿದುಕೊಳ್ಳಿ. ಬಳಿಕ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಅಚ್ಚ ಖಾರದ ಪುಡಿ ಹಾಕಿ 2 ನಿಮಿಷ ಕೈಯಾಡಿಸಿ.
- ಬಳಿಕ ಚಿಕನ್ ಬೆಂದ ಪಾತ್ರೆಯಲ್ಲಿರುವ ಸೂಪ್ (ನೀರು)ನ್ನು ಇದಕ್ಕೆ ಹಾಕಿ ನೀರು ಆವಿಯಾಗುವವರೆಗೆ ಕೈಯಾಡಿಸಿ. ನಂತರ ಬೆಂದ ಚಿಕನ್ ನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 2-3 ನಿಮಿಷ ಒಲೆಯ ಮೇಲಿಟ್ಟು, ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಸ್ಪೈಸಿ ರೆಡ್ ಚಿಕನ್ ಚಿಲ್ಲಿ ಸವಿಯಲು ಸಿದ್ಧ.