ತೆಂಗಿನಕಾಯಿ ವಡೆ

ರುಚಿಕರವಾದ ತೆಂಗಿನಕಾಯಿ ವಡೆ ಮಾಡುವ ವಿಧಾನ...
ತೆಂಗಿನಕಾಯಿ ವಡೆ
ತೆಂಗಿನಕಾಯಿ ವಡೆ

ಬೇಕಾಗುವ ಪದಾರ್ಥಗಳು...

  • ಅಕ್ಕಿ ಹಿಟ್ಟು- 3 ಬಟ್ಟಲು
  • ತೆಂಗಿನಕಾಯಿ ತುರಿ- ಅರ್ಧ ಬಟ್ಟಲು
  • ಎಳ್ಳು- ಅರ್ಧ ಚಮಚ
  • ಜೀರಿಗೆ- ಅರ್ಧ ಚಮಚ
  • ಬೆಣ್ಣೆ- ಅರ್ಧ ಚಮಚ
  • ಅರಿಶಿನ- ಚಿಟಕೆಯಷ್ಟು
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಕರಿಯಲು ಅಗತ್ಯವಿರುವಷ್ಟು

ಮಾಡುವ ವಿಧಾನ...    

  • ಅಕ್ಕಿ ಹಿಟ್ಟನ್ನು ನೀರು ಹಾಕಿ ಹದಕ್ಕೆ ಕಲೆಸಿಕೊಳ್ಳಬೇಕು, ನಂತರ ತೆಂಗಿನ ತುರಿ, ಎಳ್ಳು, ಜೀರಿಗೆ, ಉಪ್ಪು, ಅರಿಶಿನ ಹಾಕಿ ನಾದಬೇಕು.
  • ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ನಾದಿದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ತೆಳ್ಳಗೆ ತಟ್ಟಿ ಎಣ್ಣೆಯಲ್ಲಿ ಕರಿದರೆ ರುಚಿಯಾದ ತೆಂಗಿನಕಾಯಿ ವಡೆ ಸವಿಯಲು ಸಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com