ಕಡಲೇಬೀಜ ಉಂಡೆ

ರುಚಿಕರವಾದ ಕಡಲೇಬೀಜ ಉಂಡೆ ಮಾಡುವ ವಿಧಾನ...
ಕಡಲೇಬೀಜ ಉಂಡೆ
ಕಡಲೇಬೀಜ ಉಂಡೆ

ಬೇಕಾಗುವ ಪದಾರ್ಥಗಳು...

  • ಕಡಲೇಬೀಜ – 2 ಬಟ್ಟಲು ( ಹುರಿದು ಸಿಪ್ಪೆ ತೆಗೆದದ್ದು)
  • ಬೆಲ್ಲ – 2 ಬಟ್ಟಲು
  • ತುಪ್ಪ – ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಮಧ್ಯಮ ಉರಿಯಲ್ಲಿ ಕಡಲೇಬೀಜವನ್ನು ಚೆನ್ನಾಗಿ ಹುರಿಯಿರಿ. ನಂತರ ಇದನ್ನು ಒಂದು ಬಟ್ಟೆಗೆ ಹಾಕಿ ಆರಿದ ನಂತರ ಅದರ ಸಿಪ್ಪೆಯನ್ನು ತೆಗೆದು, ಬಳಿಕ ಸ್ವಲ್ಪ ಕುಟ್ಟಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
  • ನಂತರ ಒಂದು ಬಾಣಲೆಗೆ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಕುದಿಸಿ. ಈ ಪಾಕವನ್ನು ಶೋಧಿಸಿ ಮತ್ತೆ ಬಾಣನೆಗೆ ಬಾಕಿ. ನಂತರ ಪಾಕ ಆದ ಬಳಿಕ ತುಪ್ಪ ಹಾಕಿ.
  • ಬಳಿಕ ಕಡಲೇಬೀಜ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಸ್ಟೌ ಆಫ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ. ಪಾಕ ಸ್ವಲ್ಪ ಆರಿದ ಮೇಲೆ ಉಂಡೆ ಕಟ್ಟಿದರೆ ರುಚಿಕರವಾದ ಕಡಲೇಬೀಜಜ ಉಂಡೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com