ಮೂಲಂಗಿ ಮೊಸರು ಬಜ್ಜಿ

ರುಚಿಕರವಾದ ಮೂಲಂಗಿ ಮೊಸರು ಬಜ್ಜಿ ಮಾಡುವ ವಿಧಾನ...
ಮೂಲಂಗಿ ಮೊಸರು ಬಜ್ಜಿ
ಮೂಲಂಗಿ ಮೊಸರು ಬಜ್ಜಿ

ಬೇಕಾಗುವ ಪದಾರ್ಥಗಳು...

  • ಮೂಲಂಗಿ- 3
  • ಮೊಸರು- 3/4 ಬಟ್ಟಲು
  • ಉಪ್ಪು- ಅಗತ್ಯಕ್ಕೆ ತಕ್ಕಷ್ಟು
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
  • ಹಸಿಮೆಣಸಿನಕಾಯಿ-1
  • ತೆಂಗಿನಕಾಯಿ ತುರಿ- 1 ಸಣ್ಣ ಬಟ್ಟಲು
  • ಸಾಸಿವೆ- ಸ್ವಲ್ಪ
  • ಜೀರಿಗೆ-ಸ್ವಲ್ಪ
  • ಕಡಲೆ ಬೇಳೆ- ಸ್ವಲ್ಪ
  • ಉದ್ದಿನ ಬೇಳೆ- ಸ್ವಲ್ಪ
  • ಎಣ್ಣೆ- 1 ಚಮಚ

ಮಾಡುವ ವಿಧಾನ...

  • ಮೊದಲಿಗೆ ಮೂಲಂಗಿ ತುದಿಗಳನ್ನು ಕತ್ತರಿಸಿ, ಮೇಲ್ಭಾಗದಲ್ಲಿ ಇರುವಂತಹ ಸಿಪ್ಪೆ ತೆಗೆದುಹಾಕಿ. ಚೆನ್ನಾಗಿ ತೊಳೆದು ಸಣ್ಣದಾಗಿ ಸಣ್ಣಗೆ ಹೆಚ್ಚಿಕೊಳ್ಳಿ. ಮೊಸರಿನೊಂದಿಗೆ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ
  • ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ, ಕಡಲೇ ಬೇಳೆ, ಜೀರಿಗೆ ಎಲ್ಲವನ್ನು ಕೆಂಪಗೆ ಹುರಿದುಕೊಳ್ಳಿ. ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಇದರಲ್ಲಿ ಹಾಕಿ, ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಹುರಿಯಿರಿ ಮತ್ತು ಎಲ್ಲವನ್ನೂ ಮಿಶ್ರಣ ಮಾಡಿದರೆ ರುಚಿಕರವಾದ ಮೂಲಂಗಿ ಮೊಸರು ಬಜ್ಜಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com