ಕಬ್ಬಿನ ಹಾಲಿನ ಹಲ್ವ

ರುಚಿಕರವಾದ ಕಬ್ಬಿನ ಹಾಲಿನ ಹಲ್ವ ಮಾಡುವ ವಿಧಾನ...
ಕಬ್ಬಿನ ಹಾಲಿನ ಹಲ್ವ
ಕಬ್ಬಿನ ಹಾಲಿನ ಹಲ್ವ

ಬೇಕಾಗುವ ಪದಾರ್ಥಗಳು...

  • ಕಬ್ಬಿನ ಹಾಲು- ಅರ್ಧ ಲೀಟರ್
  • ಅಕ್ಕಿ- ಒಂದು ಬಟ್ಟಲು
  • ಏಲಕ್ಕಿ ಪುಡಿ- ಸ್ವಲ್ಪ
  • ತುಪ್ಪ-ಸ್ವಲ್ಪ
  • ಬೆಲ್ಲ-ಸ್ವಲ್ಪ

ಮಾಡುವ ವಿಧಾನ...

  • ಅಕ್ಕಿಯನ್ನು ತೊಳೆದು ಸ್ವಲ್ಪ ನೀರಿನಲ್ಲಿ 2 ಗಂಟೆ ನೆನೆಸಿಡಿ. ನಂತರ ಇದನ್ನು ಅರ್ಧದಷ್ಟು ಕಬ್ಬಿನ ರಸದ ಜೊತೆ ಸೇರಿಸಿ. ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  • ದಪ್ಪ ಬಾಣಲೆಗೆ ಮಿಶ್ರಣವನ್ನು ಹಾಕಿ ಉಳಿದ ಕಬ್ಬಿನ ರಸ ಸೇರಿಸಿ. ಸ್ವಲ್ಪ ಬೆಲ್ಲ ಸೇರಿಸಿ ತಳ ಬಿಡುವವರೆಗೆ ಕಾಯಿಸಿ.
  • ಬೆಂದ ನಂತರ ತುಪ್ಪ ಸವರಿದ ಪ್ಲೇಟ್‌ಗೆ ಹಾಕಿ ಸಮನಾಗಿ ಹರಡಿಕೊಳ್ಳಿ. .ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿದರೆ ಕಬ್ಬಿನ ಹಾಲಿನ ಹಲ್ವ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com