ದಹಿ ಕಬಾಬ್

ರುಚಿಕರವಾದ ದಹಿ ಕಬಾಬ್ ಮಾಡುವ ವಿಧಾನ...
ದಹಿ ಕಬಾಬ್
ದಹಿ ಕಬಾಬ್

ಬೇಕಾಗುವ ಪದಾರ್ಥಗಳು...

  • ಗಟ್ಟಿ ಮೊಸಲು- 3 ಬಟ್ಟಲು
  • ಪನ್ನೀರ್- 1 ಬಟ್ಟಲು (ತುರಿದದ್ದು)
  • ಈರುಳ್ಳಿ- ಸ್ವಲ್ಪ (ಸಣ್ಣಗೆ ಕತ್ತರಿಸಿದ್ದು)
  • ಶುಂಠಿ- ಸ್ವಲ್ಪ (ಸಣ್ಣಗೆ ಕತ್ತರಿಸಿದ್ದು)
  • ಹಸಿ ಮೆಣಸಿನ ಕಾಯಿ - 2 (ಸಣ್ಣಗೆ ಕತ್ತರಿಸಿದ್ದು)
  • ಗೋಡಂಬಿ- 2 ಚಮಚ (ಸಣ್ಣಗೆ ಕತ್ತರಿಸಿದ್ದು)
  • ಜೀರಿಗೆ ಪುಡಿ- ಅರ್ಧ ಚಮಚ
  • ಗರಂ ಮಸಾಲಾ - ಅರ್ಧ ಚಮಚ
  • ಕಾಳು ಮೆಣಸಿನ ಪುಡಿ- ಅರ್ಧ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಕೊತ್ತಂಬರಿ ಸೊಪ್ಪು- (ಸಣ್ಣಗೆ ಕತ್ತರಿಸಿದ್ದು)
  • ಕಡಲೆ ಹಿಟ್ಟು - 2 ಚಮಚ
  • ಬ್ರೆಡ್ ಕ್ರಂಬ್ಸ್- 1 ಬಟ್ಟಲು
  • ಎಣ್ಣೆ- ಕರಿಯಲು

ಮಾಡುವ ವಿಧಾನ...

  • ಮೊದಲು 3 ಕಪ್ ಮೊಸರು ತೆಗೆದುಕೊಂಡು ಶುದ್ಧ ಬಿಳಿ ಬಟ್ಟೆಯಲ್ಲಿ ಸೋರಿ ಹಾಕಿ. ನೀರು ಸೋರಲು ಬಿಡಿ.
  • ಬಳಿಕ ಗಟ್ಟಿಯಾದ ಮೊಸರಿಗೆ, ಪನೀರ್, ಈರುಳ್ಳಿ, ಶುಂಠಿ, ಮೆಣಸಿನಕಾಯಿ ಮತ್ತು ಗೋಡಂಬಿಯನ್ನು ಸೇರಿಸಿ.
  • ನಂತರ ಜೀರಿಗೆ ಪುಡಿ, ಗರಂ ಮಸಾಲಾ, ಕಾಳು ಮೆಣಸಿನ ಪುಡಿ ಮತ್ತು ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.ಬಳಿಕ ಕಡಲಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಸಣ್ಣ ಚೆಂಡಿನ ಗಾತ್ರದ ಮಿಶ್ರಣವನ್ನು ತೆಗೆದುಕೊಂಡು ಕಟ್ಲೆಟ್‌ ಆಕಾರದಲ್ಲಿ ನೀಡಿ. ಬಳಿಕ ಬ್ರೆಡ್ ಕ್ರಂಬ್ಸ್ ಮೇಲೆ ರೋಲ್ ಮಾಡಿ.
  • ಬಳಿಕ 1 ಗಂಟೆ ಗಟ್ಟಿಯಾಗುವವರೆಗೆ ಫ್ರೀಜರ್ ನಲ್ಲಿ ಇಡಿ. ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಕಾದ ಎಣ್ಣೆಗೆ ಒಂದೊಂದನ್ನೇ ಹಾಕಿ, ಚಿನ್ನದ ಬಣ್ಣ ಬರುವವರೆಗೆ ಫ್ರೈ ಮಾಡಿ. ಇದೀಗ ರುಚಿಕರವಾದ ದಹಿ ಕಬಾಬ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com