
ಮೆಂತ್ಯೆ ಲೇಹ್ಯ
ಬೇಕಾಗುವ ಪದಾರ್ಥಗಳು
- ಮೆಂತ್ಯೆ- 1 ಬಟ್ಟಲು
- ತುಪ್ಪ- 1 ಬಟ್ಟಲು
- ಬೆಲ್ಲ- 1 ಬಟ್ಟಲು
- ಗಸಗಸೆ ಪುಡಿ- 1 ಚಮಚ
ಮಾಡುವ ವಿಧಾನ...
- ಮೆಂತ್ಯೆಯನ್ನು ಚೆನ್ನಾಗಿ ತೊಳೆದು ರಾತ್ರಿ ವೇಳೆ ನೆನೆಸಿಡಿ.
- ಬೆಳಿಗ್ಗೆ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಬಾಣಲೆಗೆ ತುಪ್ಪ ಹಾಕಿ. ಕಾದ ನಂತರ ರುಬ್ಬಿದ ಮೆಂತ್ಯೆಯನ್ನು ಹಾಕಿ. ಆಗಾಗ್ಗೆ ಕೈಯಾಡಿಸಿ. ಬಳಿಕ ಬೆನ್ನವನ್ನು ಸೇರಿ, ನೀರಿನ ಅಂಶ ಇಂಗುವವರೆಗೂ ಸ್ವಲ್ಪ ಸ್ವಲ್ಪವೇ ತುಪ್ಪ ಸೇರಿಸಿ ಕೈಯಾಡಿಸಿ.
- ಬಳಿಕ 1 ಚಮಚ ಗಸಗಸೆಯನ್ನು ಬೆರಿಸಿ, ಕೈಯಾಡಿಸಿ. ಬಳಿಕ ಬಾಣಲೆಯಲ್ಲಿನ ಪದಾರ್ಥ ತಳ ಬಿಡಲು ಆರಂಭವಾಗುತ್ತದೆ. ಬಳಿಕ ಸ್ಟೌವ್ ಆಫ್ ಮಾಡಿ. ತಣ್ಣಗಾಗಲು ಬಿದ್ದರೆ, ಮೆಂತ್ಯೆ ಲೇಹ್ಯ ಸಿದ್ಧ.