
ಮೆಂತ್ಯೆ ಮಾವಿನಕಾಯಿ ಚಟ್ನಿ
ಬೇಕಾಗುವ ಪದಾರ್ಥಗಳು...
- ಮೆಂತ್ಯೆ- 1 ಚಮಚ
- ಮಾವಿನಕಾಯಿ- 1
- ಒಣಗಿದ ಮೆಣಸಿನಕಾಯಿ (ಬ್ಯಾಡಗಿ ಮತ್ತು ಗುಂಟೂರು) 8–9
- ಕಾಯಿ ತುರಿ- ಒಸಣ್ಣೆ ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ಬೆಲ್ಲ- ಸ್ವಲ್ಪ
- ಸಾಸಿವೆ- ಸ್ವಲ್ಪ
- ಎಣ್ಣೆ-1 ಚಮಚ
- ಕರಿಬೇವು-ಸ್ವಲ್ಪ
ಮಾಡುವ ವಿಧಾನ...
- ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಿ.
- ನಂತರ ಮಿಕ್ಸಿ ಜಾರ್ ತೆಗೆದುಕೊಂಡು ಮಾವಿನ ಕಾಯಿ, ಮೆಂತ್ಯೆ, ಮೆಣಸಿನ ಕಾಯಿ, ಕಾಯಿ ತುರಿ, ಬೆಲ್ಲ, ಉಪ್ಪು ಎಲ್ಲವನ್ನೂ ಹಾಕಿ ರುಬ್ಬಿಕೊಳ್ಳಿ.
- ಬಳಿಕ ಒಂದು ಬಾಣಲೆಯನ್ನು ಇಟ್ಟು ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಕರಿಬೇವು ಹಾಕಿ ಕೆಂಪಗೆ ಹುರಿದು ರುಬ್ಬಿದ ಚಟ್ನಿಗೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮೆಂತ್ಯೆ ಮಾವಿನ ಕಾಯಿ ಚಟ್ನಿ ಸವಿಯಲು ಸಿದ್ಧ.