ಹೊಸ ವರ್ಷದಿಂದ ಈ ಫೋನ್ ಗಳಲ್ಲಿ ವಾಟ್ಸಪ್ ಸ್ಥಗಿತ!

ಪ್ರಮುಖ ಬೆಳವಣಿಗೆಯಲ್ಲಿ ಖ್ಯಾತ ಮೆಸೇಜಿಂಗ್ ಜಾಲತಾಣ ವಾಟ್ಸಪ್ ಕೆಲ ಮೊಬೈಲ್ ಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಹೊಸ ವರ್ಷದಿಂದ ಅಂದರೆ ಜನವರಿ 1ರಿಂದಲೇ ಕೆಲ ಮೊಬೈಲ್ ಗಳಲ್ಲಿ ವಾಟ್ಸಪ್ ಸೇವೆ ಸ್ಥಗಿತವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ಖ್ಯಾತ ಮೆಸೇಜಿಂಗ್ ಜಾಲತಾಣ ವಾಟ್ಸಪ್ ಕೆಲ ಮೊಬೈಲ್ ಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಹೊಸ ವರ್ಷದಿಂದ ಅಂದರೆ ಜನವರಿ 1ರಿಂದಲೇ ಕೆಲ ಮೊಬೈಲ್ ಗಳಲ್ಲಿ ವಾಟ್ಸಪ್ ಸೇವೆ ಸ್ಥಗಿತವಾಗಲಿದೆ.

ಹೌದು.. ಬರಲಿರುವ  ಹೊಸ ವರ್ಷದಲ್ಲಿ ಹಳೆಯ ಆವೃತ್ತಿಯ ಫೋನ್‌ಗಳಲ್ಲಿ ವಾಟ್ಸಾಪ್ ಸೇವೆ ಸ್ಥಗಿತ ಗೊಳಿಸುವುದಾಗಿ ವಾಟ್ಸಾಪ್ ಸಂಸ್ಥೆ ಘೋಷಣೆ ಮಾಡಿದೆ. ಆಧುನಿಕ ಆವೃತ್ತಿಯನ್ನು ನವೀಕರಿಸಿದವರಿಗೆ ಮಾತ್ರ ವಾಟ್ಸಾಪ್ ಸೇವೆ ಲಭ್ಯವಾಗಲಿದೆ. ವಾಟ್ಸಾಪ್ ಹೊಸ ಆವೃತ್ತಿ ಹೊರಬಂದಾಗಲೆಲ್ಲಾ ಈ ರೀತಿ ನಡೆಯುತ್ತಿದೆ. ಪ್ರಸ್ತುತ ಆಂಡ್ರಾಯ್ಡ್ ಫೋನ್ ಬಳಸುವುವರಾದರೆ,  ೨.೩.೭ ಆಪರೇಟಿಂಗ್ ಸಿಸ್ಟಮ್‌ ಅನ್ನು, ಐಫೋನ್ ಬಳಸುವವರು ಐಒಎಸ್ ೭ ಆಪರೇಟಿಂಗ್ ಸಿಸ್ಟಮ್ ಅನ್ನು ನವೀಕರಿಸಿಕೊಳ್ಳಬೇಕು ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 
ಹಳೆಯ ಆವೃತ್ತಿಗಳ ಫೋನ್‌ಗಳು ಈ ಡಿಸೆಂಬರ್ ೩೧ ಕ್ಕೆ ಮುಕ್ತಾಯಗೊಳ್ಳುತ್ತವೆ. ಬಹುತೇಕ ಎಲ್ಲಾ ವಿಂಡೋಸ್ ಫೋನ್‌ಗಳಲ್ಲಿ ವಾಟ್ಸಾಪ್ ಅನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ವಿಂಡೋಸ್ ೧೦ ಮೊಬೈಲ್ ಫೋನ್ ಗಳು ಓಎಸ್ ಆಧಾರಿತವಾಗಿ ಕಾರ್ಯನಿರ್ವಹಿಸುತ್ತಿದ್ದರೆ ವಾಟ್ಸಾಪ್ ಸೇವೆಗಳು ಸ್ಥಗಿತ ಗೊಳ್ಳಲಿವೆ.  ಆದಾಗ್ಯೂ, ಇವುಗಳನ್ನು ಜುಲೈ ೧, ೨೦೧೯ ರಿಂದ  ಸ್ಥಗಿತಗೊಳಿಸಲಾಗುವುದು ಎಂದು ವಾಟ್ಸಾಪ್  ಸಂಸ್ಥೆ ಹೇಳಿದೆ.

ಮುಂದಿನ ವರ್ಷದಿಂದ ಈ ಕೆಳಗಿನ ಆಪರೇಟಿಂಗ್​ ಸಿಸ್ಟಮ್​ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ
1. ಆಂಡ್ರಾಯ್ಡ್​ 2.3.7 ಮತ್ತು ಹಳೆಯ ಫೋನ್ ​ಗಳು
2. ಐಒಎಸ್​ 7 ಮತ್ತು ಹಳೆಯ ಫೋನ್​ಗಳು
3. ಎಲ್ಲ ವಿಂಡೋಸ್​ ಆಪರೇಟಿಂಗ್​ ಸಿಸ್ಟಮ್​ (ಡಿಸೆಂಬರ್​ 31, 2019)

ವಾಟ್ಸ್​ಆ್ಯಪ್ ​ ಕಾರ್ಯನಿರ್ವಹಿಸುವ ಆಪರೇಟಿಂಗ್​ ಸಿಸ್ಟಮ್​
1. 4.0.3+ ಆಪರೇಟಿಂಗ್​ ಸಿಸ್ಟಮ್​ನ ಆಂಡ್ರಾಯ್ಡ್​ ಫೋನ್​ಗಳು
2. ಐಒಎಸ್​ 9+ ಆಪರೇಟಿಂಗ್​ ಸಿಸ್ಟಮ್​ನ ಐಫೋನ್​
3. ಜಿಯೋ ಫೋನ್​ ಮತ್ತು ಜಿಯೋ ಫೋನ್​ 2 ಸೇರಿದಂತೆ KaiOS 2.5.1+ ಆಪರೇಟಿಂಗ್​ ಸಿಸ್ಟಮ್​ನಲ್ಲಿ ಕಾರ್ಯನಿರ್ವಹಿಸುವ ಕೆಲ ಆಯ್ದ ಫೋನ್​ಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com