ಎಂ-ಆಧಾರ್ ಹೊಸ ಆ್ಯಪ್ ಲಾಂಚ್: ಇದರಲ್ಲಿನ ಪ್ರಯೋಜನಗಳು ಏನು?

ಆಧಾರ್ ಹೊಸ ಆ್ಯಪ್ ಲಾಂಚ್ ಮಾಡಲಾಗಿದ್ದು ಮೊಬೈಲ್ ನಲ್ಲೇ ಆಧಾರ್ ಕಾರ್ಡ್ ಕುರಿತ ಮಾಹಿತಿಗಳನ್ನು ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ. 
ಆಧಾರ್
ಆಧಾರ್

ನವದೆಹಲಿ: ಆಧಾರ್ ಹೊಸ ಆ್ಯಪ್ ಲಾಂಚ್ ಮಾಡಲಾಗಿದ್ದು ಆ್ಯಂಡ್ರಾಯ್ಡ್ ಮೊಬೈಲ್ ನಲ್ಲೇ ಆಧಾರ್ ಕಾರ್ಡ್ ಕುರಿತ ಮಾಹಿತಿಗಳನ್ನು ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ. 

ಆಧಾರ್ ವಿವರಗಳನ್ನು ಮೊಬೈಲ್ ಫೋನ್ ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಅನುವು ಮಾಡಿಕೊಡಲು ಹೊಸ ಎಂ-ಆಧಾರ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ. 

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ದ ಡೇಟಾಬೇಸ್ ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯ ಮೂಲಕ ಗೂಗಲ್ ಪ್ಲೇ ಸ್ಟೋರ್ ನಿಂದ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಆಧಾರ್ ಹೊಂದಿರುವವರು ತಮ್ಮ ಮೊಬೈಲ್ ಫೋನ್ ನಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ ವಿಳಾಸ ಮತ್ತು ಛಾಯಾಚಿತ್ರದಂತಹ ಮಾಹಿತಿ ದಾಖಲಾತಿಗೆ ಈ ಆ್ಯಪ್ ಬಳಸಿಕೊಳ್ಳಬಹುದಾಗಿದೆ. ಅಲ್ಲದೆ ಮಾಹಿತಿ ಬದಲಿಸಿದ ನಂತರ ಹೊಸ ಆಧಾರ್ ಕಾರ್ಡ್ ಪಡೆಯಲು 50 ರುಪಾಯಿ ನೀಡಿದರೆ ಮುಂದಿನ 15 ದಿನಗಳಲ್ಲಿ ನೀವು ನೀಡಿರುವ ವಿಳಾಸಕ್ಕೆ ಕಾರ್ಡ್ ಬರುತ್ತದೆ.

ಈ ಆ್ಯಪ್ 13 ಭಾಷೆಗಳಲ್ಲಿ ಸಿಗುತ್ತದೆ. ಇಂಗ್ಲೀಷ್, ಹಿಂದಿ, ಬೆಂಗಾಲಿ, ಒಡಿಯಾ, ಉರ್ದು, ತೆಲುಗು, ತಮಿಳು, ಮಲಯಾಳಂ, ಕನ್ನಡ, ಗುಜರಾತಿ, ಪಂಜಾಬ್, ಮರಾಠಿ ಮತ್ತು ಅಸ್ಸಾಮಿ.

ಮೊಬೈಲ್ ನಲ್ಲಿ ಈ ಹೊಸ ಎಂ-ಆಧಾರ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವ ವಿಧಾನ:

* ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್/ ಆ್ಯಪ್ ಸ್ಟೋರ್ ತೆರೆಯಿರಿ

* ನಂತರ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಇನ್ ಸ್ಟಾಲ್ ಬಟನ್ ಒತ್ತಿ.

* ನಿಮ್ಮ ಮೊಬೈಲ್ ಅಪ್ಲಿಕೇಶನ್‌ಗಾಗಿ ಹೊಸ ಪಾಸ್‌ವರ್ಡ್ ಹೊಂದಿಸಲು ಈಗ ನಿಮ್ಮನ್ನು ಕೇಳಲಾಗುತ್ತದೆ. ಈ ನಾಲ್ಕು-ಅಂಕಿಯ ಪಾಸ್‌ವರ್ಡ್ ಅನ್ನು ಮರೆಯಬೇಡಿ. ನೀವು ಪ್ರತಿ ಬಾರಿ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿದಾಗ ಈ ಪಾಸ್‌ವರ್ಡ್ ಅನ್ನು ನೀವು ನಮೂದಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com