ಟಿಕ್‌ಟಾಕ್ ನಿಂದ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಪರೀಕ್ಷೆ!

ಟಿಕ್‌ಟಾಕ್ ಮಾಲೀಕ ಬೈಟ್‌ಡ್ಯಾನ್ಸ್ ಇಂಕ್, ಈಗ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಅನ್ನು ಪರೀಕ್ಷಿಸುತ್ತಿದೆ. ಏಷ್ಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳಾದ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಹೊಸ ಅಪ್ಲಿಕೇಶನ್ ರೆಸ್ಸೊ ಲಭ್ಯವಿದೆ.
ಟಿಕ್‌ಟಾಕ್
ಟಿಕ್‌ಟಾಕ್

ಟಿಕ್‌ಟಾಕ್ ಯುವ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ನೆಚ್ಚಿನದಾಗಿದೆ. ಡ್ಯಾನ್ಸ್ ನಿಂದ ಕಿರು ನಟನೆ ತುಣುಕುಗಳವರೆಗೆ, ಅಭಿಮಾನಿಗಳು ಯಾವಾಗಲೂ ಅಪ್ಲಿಕೇಶನ್‌ನಲ್ಲಿ ರೆಕಾರ್ಡ್ ಮಾಡಿದ ವೀಡಿಯೊಗಳನ್ನು ಇತರ ಸಾಮಾಜಿಕ ಮಾಧ್ಯಮ ಜಾಲಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಟಿಕ್‌ಟಾಕ್ ಮಾಲೀಕ ಬೈಟ್‌ಡ್ಯಾನ್ಸ್ ಇಂಕ್, ಈಗ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಅನ್ನು ಪರೀಕ್ಷಿಸುತ್ತಿದೆ. ಏಷ್ಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳಾದ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಹೊಸ ಅಪ್ಲಿಕೇಶನ್ ರೆಸ್ಸೊ ಲಭ್ಯವಿದೆ.

ಸೆನ್ಸಾರ್ ಟವರ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಆರು ತಿಂಗಳ ಹಿಂದೆ ಪ್ರಾರಂಭವಾದಾಗಿನಿಂದ, ರೆಸ್ಸೊವನ್ನು ಐಒಎಸ್ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ನಾದ್ಯಂತ ಸುಮಾರು 27,000 ಬಳಕೆದಾರರು ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಬೀಜಿಂಗ್ ಮೂಲದ ಈ ಕಂಪನಿಯು ಭಾರತದ ಟಿ-ಸೀರೀಸ್ ಮತ್ತು ಟೈಮ್ಸ್ ಮ್ಯೂಸಿಕ್ ನಿಂದ ಹಕ್ಕುಗಳನ್ನು ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com