ಬಜೆಟ್ ಸ್ಮಾರ್ಟ್‌ಫೋನ್ ನೋಕಿಯಾ 2.3 ಶೀಘ್ರದಲ್ಲೇ ಭಾರತಕ್ಕೆ!

ನೋಕಿಯಾ 2.3 ಶೀಘ್ರದಲ್ಲೇ ಭಾರತಕ್ಕೆ ಬರಲಿದೆ, ಕಂಪನಿಯು ಟ್ವಿಟರ್‌ನಲ್ಲಿ ಒಂದೆರಡು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ನೋಕಿಯಾ ಈ ಮುನ್ಸೂಚನೆ ನೀಡಿದೆ.
ಬಜೆಟ್ ಸ್ಮಾರ್ಟ್‌ಫೋನ್ ನೋಕಿಯಾ 2.3
ಬಜೆಟ್ ಸ್ಮಾರ್ಟ್‌ಫೋನ್ ನೋಕಿಯಾ 2.3

ನೋಕಿಯಾ 2.3 ಈ ವಾರದ ಆರಂಭದಲ್ಲಿ ಈಜಿಪ್ಟ್‌ನ ಕೈರೋದಲ್ಲಿ ಬಿಡುಗಡೆಗೊಂಡಿತು. ಈಗ, ಬಜೆಟ್ ನೋಕಿಯಾ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ, ಕಂಪನಿಯು ಟ್ವಿಟರ್‌ನಲ್ಲಿ ಒಂದೆರಡು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ನೋಕಿಯಾ ಈ ಮುನ್ಸೂಚನೆ ನೀಡಿದೆ.

ನೋಕಿಯಾ ತನ್ನ ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ಮುಂಬರುವ ಫೋನ್‌ನ ಎರಡು ಟೀಸರ್ ಗಳನ್ನು ಹಂಚಿಕೊಂಡಿದೆ. ಮೊದಲ ಟೀಸರ್ ವೀಡಿಯೊ ನೋಕಿಯಾ 2.3 ರ ಬ್ಯಾಟರಿ ಸಾಮರ್ಥ್ಯವನ್ನು ತೋರಿಸುತ್ತದೆ, ಎರಡನೆಯದು ನೋಕಿಯಾ 2.3 ರಲ್ಲಿ ಪೋರ್ಟ್ರೇಟ್ ಮೋಡ್ ಅನ್ನು ಹೈಲೈಟ್ ಮಾಡಿ ತೋರಿಸುತ್ತದೆ.

ಯುರೋಪ್ ನಲ್ಲಿ ನೋಕಿಯಾ 2.3 ಫೋನನ್ನು, 109 ಯುರೋಗಳಿಗೆ (ರೂ. 8,700 ಅಂದಾಜು) ಮಾರಾಟ ಮಾಡಲಾಗುತ್ತಿದೆ.

ವಿಶೇಷಣಗಳ ಪ್ರಕಾರ, ಸಾಧನವು 19:9 ಆ್ಯಸ್ಪೆಕ್ಟ್ ಅನುಪಾತದೊಂದಿಗೆ 6.2-ಇಂಚಿನ ಎಚ್‌ಡಿ + (720x1520 ಪಿಕ್ಸೆಲ್‌ಗಳು) ಇನ್-ಸೆಲ್ ಡಿಸ್ಪ್ಲೇ ಹೊಂದಿದೆ. ಮುಂಭಾಗದಲ್ಲಿ ಟಿಯರ್‌ಡ್ರಾಪ್ ನಾಚ್ ಇದ್ದು, ಇದು ಫೋನ್‌ನ ಎಫ್ / 2.4 ಅಪೆರ್ಚರ್ ಇರುವ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಡ್ಯುಯಲ್ ಸಿಮ್ (ನ್ಯಾನೊ) ನೋಕಿಯಾ 2.3 ಫೋನ್ ಮೀಡಿಯಾ ಟೆಕ್ ಹೆಲಿಯೊ ಎ 22 ಎಸ್‌ಒಸಿ ನಿಂದ ಶಕ್ತವಾಗಿದ್ದು, ಇದರೊಂದಿಗೆ 2 ಜಿಬಿ RAM ಮತ್ತು 32 ಜಿಬಿ ಇನ್-ಬಿಲ್ಟ್ ಸ್ಟೋರೇಜ್ ಹೊಂದಿದೆ. ಫೋನ್ ಆಂಡ್ರಾಯ್ಡ್ 9.0 ಪೈ ಸಾಫ್ಟ್‌ವೇರ್ ನಲ್ಲಿ ಕಾರ್ಯನಿರ್ವಹಿಸುತ್ತದೆ.

ಆಪ್ಟಿಕ್ಸ್ ದೃಷ್ಟಿಯಿಂದ, ಸಾಧನವು ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, 2 ಎಂಪಿ ಡೆಪ್ತ್ ಸೆನ್ಸಾರ್ ಇರುವ 13 ಎಂಪಿ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದ್ದು, 5 ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇತರ ಪ್ರಮುಖ ವಿಶೇಷಣಗಳಲ್ಲಿ 4,000mAh ಬ್ಯಾಟರಿ, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com