ಮೊಬೈಲ್ ನಂಬರ್ ಪೋರ್ಟಿಂಗ್ ಈಗ ಮತ್ತಷ್ಟು ಸುಲಭ, ಶೀಘ್ರ: ಟ್ರಾಯ್ ನ ಪರಿಷ್ಕೃತ ನಿಯಮಗಳು ಹೀಗಿವೆ

ಮೊಬೈಲ್ ನಂಬರ್ ಪೋರ್ಟಬಿಲಿಟಿ (MNP) ಸೇವೆಗಳಿಗೆ ಟ್ರಾಯ್ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಸುಲಭ ಹಾಗೂ ತ್ವರಿತ ಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 
ಮೊಬೈಲ್ ನಂಬರ್ ಪೋರ್ಟಿಂಗ್ ಈಗ ಮತ್ತಷ್ಟು ಸುಲಭ, ಶೀಘ್ರ: ಹೀಗಿದೆ ಟ್ರಾಯ್ ನ ಪರಿಷ್ಕೃತ ನಿಯಮಗಳ ಬಗ್ಗೆ ಮಾಹಿತಿ
ಮೊಬೈಲ್ ನಂಬರ್ ಪೋರ್ಟಿಂಗ್ ಈಗ ಮತ್ತಷ್ಟು ಸುಲಭ, ಶೀಘ್ರ: ಹೀಗಿದೆ ಟ್ರಾಯ್ ನ ಪರಿಷ್ಕೃತ ನಿಯಮಗಳ ಬಗ್ಗೆ ಮಾಹಿತಿ

ನವದೆಹಲಿ: ಮೊಬೈಲ್ ನಂಬರ್ ಪೋರ್ಟಬಿಲಿಟಿ (MNP) ಸೇವೆಗಳಿಗೆ ಟ್ರಾಯ್ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಸುಲಭ ಹಾಗೂ ತ್ವರಿತ ಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 

ಡಿ.16 ರಿಂದಲೇ ಈ ಪರಿಷ್ಕೃತ ನಿಯಮಗಳು ಜಾರಿಯಾಗಲಿದ್ದು, 3-5 ದಿನಗಳಲ್ಲಿ ಎಂಎನ್ ಪಿ ಪ್ರಕ್ರಿಯೆ ಪೂರ್ಣಗೊಳ್ಳುವ ವ್ಯವಸ್ಥೆ ಗ್ರಾಹಕರಿಗೆ ಲಭ್ಯವಾಗಲಿದೆ.; 

ಎಂಎನ್ ಪಿಗೆ ಅರ್ಹತೆಯನ್ನು ಮೊಬೈಲ್ ನಂಬರ್ ಪೋರ್ಟಬಲಿಟಿ ಸರ್ವಿಸ್ ಪ್ರೊವೈಡರ್ ವಿಶಿಷ್ಟ ಪೋರ್ಟಿಂಗ್ ಕೋಡ್ (ಯುಪಿಸಿ) ನಿಂದ ನಿರ್ಧರಿಸಲಾಗುತ್ತದೆ. ಒಮ್ಮೆ ಈ ಯುಪಿಸಿ ದೊರೆತರೆ ಗ್ರಾಹಕ ಸೇವಾ ಸಿಬ್ಬಂದಿಗಳು ಚಾಲ್ತಿಯಲ್ಲಿರುವ ನಂಬರ್ ಗೆ ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳುವುದರ ಬಗ್ಗೆ ಮಾಹಿತಿ ನೀಡಲಿದ್ದಾರೆ.
 
ಷರತ್ತುಗಳೇನು?
ಪೋಸ್ಟ್ ಪೇಯ್ಡ್ ಗ್ರಾಹಕರು ಚಾಲ್ತಿಯಲ್ಲಿರುವ ಟೆಲಿಕಾಂ ಸಂಸ್ಥೆಗೆ ಬಾಕಿ ಮರುಪಾವತಿ ಮಾಡಿರಬೇಕು 

ಲೈಸೆನ್ಸ್ಡ್ ಸರ್ವಿಸ್ ಏರಿಯಾ( ಎಲ್ಎಸ್ಎಎಸ್) ವ್ಯಾಪ್ತಿಗೆ ಬರುವ ಎಲ್ಲಾ ಪ್ರದೇಶಗಳಲ್ಲಿಯೂ ಯುಪಿಸಿ 4 ದಿನಗಳ ಕಾಲ ಮಾನ್ಯವಾಗಿರುತ್ತದೆ. ಜಮ್ಮು-ಕಾಶ್ಮೀರ, ಅಸ್ಸಾಂ, ಈಶಾನ್ಯರಾಜ್ಯಗಳಲ್ಲಿ ಇದರ ಅವಧಿ 30 ದಿನಗಳು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com