ಅಂತರ್ಜಾಲ ಸ್ಥಗಿತಗೊಂಡರೂ ಆಫ್ ಲೈನ್ ನಲ್ಲಿ ಕೆಲಸ ಮಾಡುವ ಮೆಸೇಜಿಂಗ್ ಆಪ್ ಗಳು ಇವು! 

ಪೌರತ್ವ ಕಾಯ್ದೆಯನ್ನು ವಿರೋಧಿಸಿ ಹಿಂಸಾಚಾರ ಸ್ವರೂಪದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತಡೆಗಟ್ಟಲು ದೇಶದ ಹಲವೆಡೆ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಆಫ್ ಲೈನ್ ನಲ್ಲಿ ಕಾರ್ಯನಿರ್ವಹಿಸುವ ಮೆಸೇಜಿಂಗ್ ಆಪ್ ಗಳಿಗೆ ಬೇಡಿಕೆ ಹೆಚ್ಚಿದೆ. ಫೈರ್ ಚಾಟ್, ಬ್ರಿಡ್ಜ್ಫಿ ಹಾಗೂ ಸಿಗ್ನಲ್ ಆಫ್ ಲೈನ್ ಮೆಸೆಂಜರ್ ಆಪ್ ಗಳು ಆಫ್ ಲೈನ್ ನಲ್ಲಿ ಕಾರ್ಯನಿರ್ವಹಿಸುವಂಥದ್ದಾಗಿವೆ. 

ಫೈರ್ ಚಾಟ್ ನ್ನು ಗೂಗಲ್ ಪ್ಲೇ ಯಿಂದ 10 ಲಕ್ಷ ಬಾರಿ ಡೌನ್ ಲೋಡ್ ಮಾಡಲಾಗಿದ್ದು, ಅಂತರ್ಜಾಲ ಸಂಪರ್ಕ ಅಥವಾ ಸೆಲ್ಯುಲರ್ ಫೋನ್ ಕವರೇಜ್ ಇಲ್ಲದೇ ಕಾರ್ಯನಿರ್ವಹಿಸುತ್ತದೆ. ಈ ಆಪ್ ಕಾರ್ಯನಿರ್ವಹಣೆ ಮಾಡಬೇಕಾದರೆ ಬ್ಲೂಟೂತ್ ಅಥವಾ ವೈಫೈ ನ್ನು ಸಕ್ರಿಯಗೊಳಿಸಬೇಕಾಗುತ್ತದೆ. ವೈಫೈ ಸಂಪರ್ಕ ಲಭ್ಯವಿಲ್ಲದಿದ್ದರೂ ಸಹ ಆಪ್ ಕಾರ್ಯನಿರ್ವಹಿಸುತ್ತದೆ. 

ಜನರು ಬಳಸಿದಂತೆಲ್ಲಾ ವೇಗವಾಗಿ ಕಾರ್ಯನಿರ್ವಹಿಸುವುದು ಫೈರ್ ಚಾಟ್ ನೆಟ್ವರ್ಕ್ ನ ವಿಶೇಷತೆಯಾಗಿದೆ. ಸರಿಯಾದ ಅಂತರ್ಜಾಲ ಸಂಪರ್ಕ ಲಭ್ಯವಿದ್ದರೆ ಈ ಆಪ್ ಮೂಲಕ ವಿಶ್ವಾದ್ಯಂತ ಸಂಪರ್ಕ ಸಾಧಿಸಬಹುದಾಗಿದೆ. ಇನ್ನು ಬ್ಲೂಟೂತ್ ಸಕ್ರಿಯಗೊಳಿಸಿದರೆ ಕಾರ್ಯನಿರ್ವಹಣೆ ಮಾಡುವ ಆಪ್ ಗಳ ಪೈಕಿ ಬ್ರಿಡ್ಜ್ಫಿ ಕೂಡ ಇದೆ. ಸಾಮಾನ್ಯವಾಗಿ ವಿಪತ್ತು ಸಂಭವಿಸಿದಾಗ, ವಿದೇಶ ಪ್ರಯಾಣ ಮಾಡಿದಾಗ ಈ ಆಪ್ ಗಳ ಬಳಕೆ ಉಪಯೋಗಕಾರಿಯಾಗಿದೆ. ಬ್ರಿಡ್ಜ್ಫಿ 5 ಲಕ್ಷ ಬಾರಿ ಡೌನ್ ಲೋಡ್ ಆಗಿದ್ದು, ಖಾಸಗಿ ಚಾಟಿಂಗ್ ಸೌಲಭ್ಯ ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com