ರಿಯಲ್‏ಮಿ ಮೊದಲ 5ಜಿ ಸ್ಮಾರ್ಟ್‌ಫೋನ್ ಜನವರಿ 7 ರಂದು ಬಿಡುಗಡೆ

2019 ರಲ್ಲಿ ಅನೇಕ 5ಜಿ ಸ್ಮಾರ್ಟ್‌ಫೋನ್‌ಗಳು ಬಿಡಿಗಡೆಯಾಗಿದ್ದರೂ ಸಹ, ಹಲವಾರು ಅಧ್ಯಯನಗಳು 2020 ರಲ್ಲಿ ಈ 5ಜಿ ವಿಭಾಗವು ಟ್ರೆಂಡ್‌ಸೆಟರ್ ಆಗಲಿದೆ ಎಂದು ಸೂಚಿಸಿವೆ.

Published: 25th December 2019 01:02 PM  |   Last Updated: 25th December 2019 01:02 PM   |  A+A-


Realme 5G smartphone X50

ರಿಯಲ್‏ಮಿ, ಎಕ್ಸ್50 5ಜಿ

Posted By : prasad
Source : The New Indian Express

2019 ರಲ್ಲಿ ಅನೇಕ 5ಜಿ ಸ್ಮಾರ್ಟ್‌ಫೋನ್‌ಗಳು ಬಿಡಿಗಡೆಯಾಗಿದ್ದರೂ ಸಹ, ಹಲವಾರು ಅಧ್ಯಯನಗಳು 2020 ರಲ್ಲಿ ಈ 5ಜಿ ವಿಭಾಗವು ಟ್ರೆಂಡ್‌ಸೆಟರ್ ಆಗಲಿದೆ ಎಂದು ಸೂಚಿಸಿವೆ. ಏಕೆಂದರೆ ಮುಂದಿನ ಪೀಳಿಗೆಯ ವೈರ್‌ಲೆಸ್ ಸಂವಹನವನ್ನು ಬೆಂಬಲಿಸಲು ಅನೇಕ ಮಾರುಕಟ್ಟೆಗಳು 2020ರಲ್ಲಿ ತಮ್ಮ ನೆಟ್‌ವರ್ಕ್ ಪರಿಸರ ವ್ಯವಸ್ಥೆಯನ್ನು ನವೀಕರಿಸುತ್ತಿವೆ.

ಈ ಸ್ಪರ್ಧೆಯಲ್ಲಿ ಮುಂಚೂಣಿಗೆ ಬರಲು, ಚೀನಾದ ಸ್ಮಾರ್ಟ್‌ಫೋನ್‌ ತಯಾರಕ ರಿಯಲ್‏ಮಿ, ಎಕ್ಸ್50 5ಜಿ ಅನ್ನು ಮುಂದಿನ ವರ್ಷ ಜನವರಿ 7 ರಂದು ಬಿಡುಗಡೆ ಮಾಡುವುದಾಗಿ ಮಂಗಳವಾರ ಘೋಷಿಸಿದ್ದು, ಇದು ಕಂಪನಿಯ ಮೊದಲ 5 ಜಿ ಸ್ಮಾರ್ಟ್‌ಫೋನ್‌ ಆಗಿರುತ್ತದೆ.

ರಿಯಲ್‏ಮಿ ಫೋನ್ ಸ್ನ್ಯಾಪ್‌ಡ್ರಾಗನ್ 765ಜಿ ಎಸ್‌ಒಸಿಯಿಂದ ಚಾಲಿತವಾಗಲಿದೆ ಮತ್ತು ಕ್ವಾಡ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

ಇದಲ್ಲದೆ, ಇದು ಡ್ಯುಯಲ್-ಚಾನೆಲ್ ವೈ-ಫೈ ವಿಒಒಸಿ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದ್ದು ಅದು ನಾಲ್ಕು ಪಟ್ಟು ವೇಗವಾಗಿರುತ್ತದೆ, ಕೇವಲ 30 ನಿಮಿಷಗಳಲ್ಲಿ ಬ್ಯಾಟರಿಯನ್ನು ಶೇಕಡಾ 0 ರಿಂದ 70 ರವರೆಗೆ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕ್ಯಾಮೆರಾವಾರು, ಹೊಸ ಫೋನ್ 64 ಮೆಗಾಪಿಕ್ಸೆಲ್ ಮುಖ್ಯ ಹಿಂಬದಿಯ ಕ್ಯಾಮೆರಾ ಮತ್ತು ಡ್ಯುಯಲ್ ಸೆಲ್ಫಿ ಕ್ಯಾಮೆರಾ ಸೆಟಪ್ ಹೊಂದಿರುವ ನಿರೀಕ್ಷೆಯಿದೆ.

ಸೆಟಪ್ ಜೊತೆಗೆ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಮತ್ತು ಎರಡು 2 ಮೆಗಾಪಿಕ್ಸೆಲ್ ಸೆನ್ಸಾರ್ ಗಳು ಇರಬಹುದು. 8 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್‌ನೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇರಲಿದೆ ಎಂದು ವರದಿಗಳು ಹೇಳುತ್ತವೆ.

ಹೊಸ ರಿಯಲ್ಮೆ ಸ್ಮಾರ್ಟ್‌ಫೋನ್‌ನ ಹ್ಯಾಂಡ್‌ಸೆಟ್ "ಐದು ಆಯಾಮದ ಐಸ್-ಕೂಲ್ಡ್" ಹೀಟ್ ಡಿಸ್ಸಿಪೇಶನ್ ವ್ಯವಸ್ಥೆಯನ್ನು ಒಳಗೊಂಡಿರುವ ನಿರೀಕ್ಷೆಯಿದೆ, ಇದು ಫೋನ್‌ನೊಳಗಿನ ಶೇಕಡಾ 100 ರಷ್ಟು ತಾಪದ ಮೂಲಗಳನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಕೆಲವು ವರದಿಗಳ ಪ್ರಕಾರ, ಫೋನ್ 6.44-ಇಂಚಿನ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ.

Stay up to date on all the latest ಗ್ಯಾಡ್ಜೆಟ್ಸ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp