ಯುಬಾನ್ ಪಿಬಿ-X12 ಪವರ್ ಕಿಂಗ್ ಪವರ್ ಬ್ಯಾಂಕ್ ಬಿಡುಗಡೆ: ವಿಶೇಷತೆಗಳೇನು ಗೊತ್ತೆ?

ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ನ ದಿಗ್ಗಜ ಯುಬಾನ್ ಹೊಸದಾಗಿ ಪಿಬಿ-X12 ಪವರ್ ಕಿಂಗ್ ಪೋರ್ಟಬಲ್ ನ್ನು ಬಿಡುಗಡೆ ಮಾಡಿದೆ. 

2,999 ರೂಪಾಯಿ ಇದರ ಬೆಲೆಯಾಗಿದ್ದು, 3 ಇನ್ 1 ಇನ್ ಬಿಲ್ಟ್ ಕೇಬಲ್ ಸಪೋರ್ಟ್ ಇದ್ದು, ಪ್ರಸ್ತುತ ಬಳಕೆಯಾಗುತ್ತಿರುವ ಚಾರ್ಜಿಂಗ್ ಉಪಕರಣಗಳಿಗಿಂತಲೂ ಗಾತ್ರದಲ್ಲಿ 10 ಪಟ್ಟು ಚಿಕ್ಕದಾಗಿದ್ದು, 100 ಪಟ್ಟು ವೇಗ ಹಾಗೂ 5 ಪಟ್ಟು ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆ ಹೇಳಿದೆ.

ಹೊಸದಾಗಿ ಬಿಡುಗಡೆಯಾಗಿರುವ ಈ ಪವರ್ ಬ್ಯಾಂಕ್ ನಲ್ಲಿ ಬಿಲ್ಟ್ ಇನ್ v8, ಟೈಪ್ ಸಿ ಕೇಬಲ್ ಹಾಗೂ ಐ ಫೋನ್ ಕೇಬಲ್ ಸೌಲಭ್ಯಗಳಿವೆ.
 
10,000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವುದು ಈ ಪವರ್ ಬ್ಯಾಂಕ್ ನ ವಿಶೇಷತೆಯಾಗಿದೆ. ಇತರ ಪವರ್ ಬ್ಯಾಂಕ್ ಗಳಿಗೆ ಹೋಲಿಕೆ ಮಾಡಿದರೆ ಈ ಪವರ್ ಬ್ಯಾಂಕ್ ನಲ್ಲಿ ಐಫೋನ್ ನನ್ನು 2.4 ಬಾರಿ, ಆಂಡ್ರಾಯ್ಡ್ ಫೋನ್ ಗಳನ್ನು 2.2 ಬಾರಿ ಚಾರ್ಜ್ ಮಾಡಬಹುದಾಗಿದೆ. 

ಪಿಬಿ-X12 ಪವರ್ ಕಿಂಗ್ ಡ್ಯುಯಲ್ ಯುಎಸ್ ಬಿ ಪೋರ್ಟ್ ಗಳಿದ್ದು, 2Aಯ ಗರಿಷ್ಠ ಔಟ್ ಪುಟ್ ಮೂಲಕ ಸ್ಮಾರ್ಟ್ ಫೋನ್ ಟ್ಯಾಬ್ಲೆಟ್ ಗಳನ್ನು ಸಾಮಾನ್ಯವಾದ 1A ಚಾರ್ಜರ್ ಗಳಿಗಿಂತಲೂ ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. 
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com