ಸ್ಯಾಮ್‌ಸಂಗ್ ಹೊಸ ‘ಕ್ಲಾಮ್‌ಶೆಲ್’ ಫೋಲ್ಡಬಲ್ ಸ್ಮಾರ್ಟ್‌ಫೋನ್ ಫೆಬ್ರವರಿ 2020 ರಲ್ಲಿ ಬಿಡುಗಡೆ!

ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ನ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಸುದ್ದಿ ಇದೀಗ ಸ್ವಲ್ಪ ದಿನದಿಂದ ಹರಿದಾಡುತ್ತಿದೆ.
ಸ್ಯಾಮ್‌ಸಂಗ್ ಫೋಲ್ಡಬಲ್ ಸ್ಮಾರ್ಟ್‌ಫೋನ್
ಸ್ಯಾಮ್‌ಸಂಗ್ ಫೋಲ್ಡಬಲ್ ಸ್ಮಾರ್ಟ್‌ಫೋನ್

ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ನ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಸುದ್ದಿ ಇದೀಗ ಸ್ವಲ್ಪ ದಿನದಿಂದ ಹರಿದಾಡುತ್ತಿದೆ. ವರದಿಗಳ ಪ್ರಕಾರ, ಕಂಪನಿಯು ಮುಂದಿನ ವರ್ಷ ತನ್ನ ಪ್ರಮುಖ ಗ್ಯಾಲಕ್ಸಿ ಎಸ್ 11 ಬಿಡುಗಡೆ ಮಾಡುವ ಮೊದಲು ಫೆಬ್ರವರಿಯಲ್ಲಿ ಕ್ಲಾಮ್‌ನಂತೆ ಮಡಚುವ ಫೋನ್ ಅನ್ನು ಬಿಡುಗಡೆ ಮಾಡಲಿದೆ.

ವರದಿಗಳ ಪ್ರಕಾರ, 2020 ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಗುರಿಯೊಂದಿಗೆ ಸ್ಯಾಮ್‌ಸಂಗ್ ತನ್ನ ಎರಡನೇ ಮಡಚಬಹುದಾದ ಸ್ಮಾರ್ಟ್‌ಫೋನ್ ಅನ್ನು ತನ್ನ ತವರಲ್ಲಿಯೇ ಮೊದಲು ಬಿಡುಗಡೆ ಮಾಡಲು ದೇಶದ ಮೂರು ಮೊಬೈಲ್ ವಾಹಕಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ತನ್ನ ‘ಅನ್ ಪ್ಯಾಕ್ಡ್’ ಈವೆಂಟ್ ಅನ್ನು ಯುಎಸ್‌ನಲ್ಲಿ ಫೆಬ್ರವರಿ ಮಧ್ಯದಲ್ಲಿ ನಡೆಸಲಿದೆ, ಅಲ್ಲಿ ಅದು ಹೊಸ ಮಡಚಬಹುದಾದ ಫೋನ್‌ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತದೆ ಎಂದು ವರದಿಯಾಗಿದೆ. ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ ತಕ್ಷಣ ಮಾರಾಟಕ್ಕೆ ಲಭ್ಯವಿರುತ್ತದೆ.

ಕಂಪನಿಯು ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಮೊಟೊರೊಲಾ ಮತ್ತು ಹುವೇ ನಂತಹ ಇತರ ಕಂಪನಿಗಳು ಸಹ ಇದೇ ರೀತಿಯ ಫೋಲ್ಡಬಲ್ ಫೋನ್ ಬಿಡುಗಡೆ ಮಾಡಲು ಯೋಜಿಸುತ್ತಿರುವುದರಿಂದ, ಸ್ಯಾಮ್‌ಸಂಗ್ ಕೂಡ ತನ್ನ ಫೋನ್ ಬಿಡುಗಡೆ ಮಾಡಲು ಬಯಸಿದೆ ಎಂದು ವರದಿಗಳು ಸೂಚಿಸುತ್ತವೆ.

2019 ರಲ್ಲಿ, ಇದು ಗ್ಯಾಲಕ್ಸಿ ಫೋಲ್ಡ್ ಅನ್ನು ಬಿಡುಗಡೆ ಮಾಡಿತು, ಅದು 7.3-ಇಂಚಿನ ಪರದೆಯನ್ನು ಹೊಂದಿದೆ, ಅಲ್ಲಿ ಬಳಕೆದಾರರು ಫೋನನ್ನು ಪುಸ್ತಕದಂತೆ ಮಡಚಬಹುದು. ಹೊಸ ಸ್ಮಾರ್ಟ್ಫೋನ್ 6.7-ಇಂಚಿನ ಡಿಸ್ಪ್ಲೇ ಹೊಂದಿರುವ ನಿರೀಕ್ಷೆಯಿದೆ ಮತ್ತು ಮಡಚಿದಾಗ ಅದು ಹೆಚ್ಚುಕಡಿಮೆ ಸ್ಕ್ವೇರ್ ಆಕಾರಕ್ಕೆ ಬರುತ್ತದೆ.

ಸುಮಾರು $2,000 ಬೆಲೆಯೊಂದಿಗೆ ಬಂದಿದ್ದ ಗ್ಯಾಲಕ್ಸಿ ಫೋಲ್ಡ್ ಗೆ ಹೋಲಿಸಿದರೆ, ಹೊಸ ಫೋಲ್ಡಬಲ್ ಆವೃತ್ತಿಯು $1,000 ರ ಮಧ್ಯದಲ್ಲಿ ಲಭ್ಯವಿರುತ್ತದೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್, ಪ್ರಸ್ತುತ 2020ರಲ್ಲಿ ಆರು ಮಿಲಿಯನ್ ಯೂನಿಟ್ ಫೋಲ್ಡಬಲ್ ಫೋನ್ ಗಳನ್ನು ಮಾರಾಟ ಮಾಡಲು ಯೋಜಿಸಿದೆ.

ಹೊಸ ವರ್ಷವನ್ನು ಗುರುತಿಸಲು ಸ್ಯಾಮ್‌ಸಂಗ್ ಮುಂಬರುವ ಫ್ಲ್ಯಾಗ್‌ಶಿಪ್‌ಗೆ ಗ್ಯಾಲಕ್ಸಿ 20 ನಂತಹ ಹೊಸ ಹೆಸರನ್ನು ಅಳವಡಿಸಿಕೊಳ್ಳಬಹುದು ಎಂಬ ವದಂತಿಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com