ಕೊನೆಗೂ ಬಿಡುಗಡೆಯಾಯ್ತು ಬಹುನಿರೀಕ್ಷಿತ ಆ್ಯಪಲ್ 11 ಸ್ಮಾರ್ಟ್ ಫೋನ್!

ಖ್ಯಾತ ಐಫೋನ್ ತಯಾರಿಕಾ ಸಂಸ್ಥೆ ಆ್ಯಪಲ್ ಕೊನೆಗೂ ತನ್ನ ಬಹು ನಿರೀಕ್ಷಿತ ಐಫೋನ್ 11 ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ.

Published: 11th September 2019 08:16 AM  |   Last Updated: 09th December 2019 04:48 PM   |  A+A-


Apple unveils iPhone 11

ಐಫೋನ್ 11 ಸರಣಿ ಫೋನ್

Posted By : Srinivasamurthy VN
Source : PTI

ಕ್ಯಾಲಿಫೋರ್ನಿಯಾ: ಖ್ಯಾತ ಐಫೋನ್ ತಯಾರಿಕಾ ಸಂಸ್ಥೆ ಆ್ಯಪಲ್ ಕೊನೆಗೂ ತನ್ನ ಬಹು ನಿರೀಕ್ಷಿತ ಐಫೋನ್ 11 ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಕುಪರ್ಟಿನೊದ ಆ್ಯಪಲ್ ಕ್ಯಾಂಪಸ್‌ನ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ನಡೆದ ಆ್ಯಪಲ್ ವಿಶೇಷ ಕಾರ್ಯಕ್ರಮದಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ನೂತನ ಆ್ಯಪಲ್ ಐಫೋನ್ ಮಾದರಿಗಳನ್ನು ಘೋಷಿಸಿದರು. ಆ್ಯಪಲ್ ಐಫೋನ್ 11, ಆ್ಯಪಲ್ ಐಫೋನ್ 11 ಪ್ರೋ, ಆ್ಯಪಲ್ ಐಫೋನ್ 11 ಪ್ರೋ ಮ್ಯಾಕ್ಸ್ ಫೋನ್ ಗಳನ್ನು ಬಿಡುಗಡೆ ಮಾಡಲಾಯಿತು.

ನಿರೀಕ್ಷೆಯಂತೆ ಆ್ಯಪಲ್ ಹೊಸ ಐಫೋನ್ 11 ಸರಣಿಯಲ್ಲಿ ಮೂರು ಹೊಸ ಐಫೋನ್ ಅನ್ನು ಘೋಷಿಸಿದ್ದು, 699 ಡಾಲರ್ ಆರಂಭಿಕ ಬೆಲೆ ಹೊಂದಿದೆ. ಅಮೆರಿಕದಲ್ಲಿ ಸೆ. 20 ರಿಂದ ಹೊಸ ಐಫೋನ್ ಆ್ಯಪಲ್ ಸ್ಟೋರ್ ಮೂಲಕ ದೊರೆಯಲಿದೆ. ಜತೆಗೆ ಪ್ರಮುಖ ಆನ್‌ಲೈನ್ ಸ್ಟೋರ್‌ಗಳ ಮೂಲಕವೂ ಲಭ್ಯವಾಗಲಿದೆ. 

ಹೊಸ ಆ್ಯಪಲ್ ಐಪೋನ್ ಜತೆಗೆ ಆ್ಯಪಲ್ ನೂತನ ಐಓಎಸ್ 13, ಆ್ಯಪಲ್ ಮ್ಯಾಕ್ ಲ್ಯಾಪ್‌ಟಾಪ್ ಮತ್ತು ಐಮ್ಯಾಕ್ ಸಿಸ್ಟಂಗಳಿಗೆ ನೂತನ ಮ್ಯಾಕ್ ಓಎಸ್ ಕ್ಯಾಟಲೀನ ಕಾರ್ಯಾಚರಣ ವ್ಯವಸ್ಥೆ ಹಾಗೂ ಐಪ್ಯಾಡ್‌ಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಪ್ಯಾಡ್ ಓಎಸ್ ಮತ್ತು ಆ್ಯಪಲ್ ಐವಾಚ್‌ ನೂತನ ಓಎಸ್ ವಾಚ್ ಓಎಸ್ 6 ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. 

width=100%

ಐಫೋನ್ 11 ಸರಣಿ ಫೋನ್ ಗಳ ವಿಶೇಷತೆ ಏನು?
ಆ್ಯಪಲ್ ಈ ಬಾರಿಯ ಕಾರ್ಯಕ್ರಮದಲ್ಲಿ 7ನೇ ತಲೆಮಾರಿನ ನೂತನ ಐಪ್ಯಾಡ್, ಆ್ಯಪಲ್ ಐವಾಚ್ ಸಿರೀಸ್ 5 ಮತ್ತು ಬಹುನಿರೀಕ್ಷಿತ ಐಫೋನ್ 11 ಮತ್ತು ಐಫೋನ್ 11 ಪ್ರೊ ಹಾಗೂ ಐಫೋನ್ 11 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆಯಾಯಿತು. ಇದರ ಜೊತೆಗೆ ಆ್ಯಪಲ್ ಟಿವಿ+, ಆ್ಯಪಲ್ ಆರ್ಕೇಡ್ ಗೇಮ್ ಅನ್ನು ಕೂಡ ಪರಿಚಯಿಸಲಾಯಿತು. ಹಿಂಬದಿಯಲ್ಲಿ ಎರಡು ಕ್ಯಾಮರಾ ಹೊಂದಿರುವ ಐಪೋನ್ 11, 699 ಅಮೆರಿಕನ್ ಡಾಲರ್ ಬೆಲೆ ಹೊಂದಿದೆ.  ಆ್ಯಪಲ್ A13 ಬಯೋನಿಕ್ ಚಿಪ್‌ ಅನ್ನು ಹೊಸ ಐಫೋನ್ 11 ಸರಣಿಯಲ್ಲಿ ಬಳಸಿಕೊಂಡಿದೆ. ಈವರೆಗೆ ಬಿಡುಗಡೆಯಾಗಿರುವ ಯಾವುದೇ ಐಫೋನ್‌ಗಿಂತ ಅಥವಾ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಿಂತ ಆ್ಯಪಲ್ ಐಪೋನ್ 11 ಪ್ರೊ ಫೋನ್ ಅತ್ಯಂತ ಗರಿಷ್ಠ ವೇಗದ ಕಾರ್ಯಾಚರಣೆ ಹೊಂದಿದೆ. ಜತೆಗೆ ಹಿಂಬದಿಯಲ್ಲಿ ಅತ್ಯುತ್ತಮ ತ್ರಿವಳಿ ಕ್ಯಾಮರಾ, ಐಫೋನ್ 11 ಪ್ರೊ ವಿಶೇಷತೆಯಾಗಿದೆ. 

width=100%

ಇನ್ನು ಬೆಲೆಯ ವಿಚಾರದಲ್ಲೂ ಆ್ಯಪಲ್ ನಿರೀಕ್ಷೆ ಹುಟ್ಟಿಸಿತ್ತಾದರೂ, ಬೆಲೆ ಕೂಡ ಕೊಂಚ ಹೆಚ್ಚೇ ಇದೆ.  ಅದರ ಜತೆಗೆ ಕ್ಯಾಶ್‌ಬ್ಯಾಕ್, ಆರಂಭಿಕ ಕೊಡುಗೆಗಳೂ ಹೊಸ ಆ್ಯಪಲ್ ಐಫೋನ್ ಮೇಲೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

Stay up to date on all the latest ಗ್ಯಾಡ್ಜೆಟ್ಸ್ news with The Kannadaprabha App. Download now
facebook twitter whatsapp