ಫೇಸ್ ಬುಕ್ ನಿಂದ ಹೊಸ ಗೇಮಿಂಗ್ ಆ್ಯಪ್ ಬಿಡುಗಡೆ; ಗೂಗಲ್ ಪ್ಲೇ ಸ್ಟೋರ್ ನಲ್ಲಿ ಶೀಘ್ರ ಲಭ್ಯ

ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಬಳಕೆದಾರರಿಗಾಗಿ ಹೊಸ ಗೇಮಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದೆ.
ಫೇಸ್ ಬುಕ್-ಗೇಮಿಂಗ್ ಆ್ಯಪ್
ಫೇಸ್ ಬುಕ್-ಗೇಮಿಂಗ್ ಆ್ಯಪ್

ನವದೆಹಲಿ: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಬಳಕೆದಾರರಿಗಾಗಿ ಹೊಸ ಗೇಮಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದೆ.

ಫೇಸ್​ಬುಕ್ ತನ್ನ ಬಳಕೆದಾರರಿಗೆ ಸದಾ ಏನಾದರೂ ಒಂದು ಹೊಸ ವಿಚಾರವನ್ನು ನೀಡುತ್ತಲೇ ಬಂದಿದೆ. ಫೇಸ್​ಬುಕ್ ಈ ಹಿಂದೆ ಇನ್​ಸ್ಟಾಗ್ರಾಂ ಮೂಲಕ ಜನರಿಗೆ ಸೋಷಿಯಲ್ ಮೀಡಿಯಾದ ಗೀಳು ಹತ್ತಿಸಿತ್ತು. ಇದೀಗ ತನ್ನ ಹೊಸ ಗೇಮಿಂಗ್ ಆ್ಯಪ್​​​​ ಲಾಂಚ್ ಮಾಡುವ ಮೂಲಕ  ಬಳಕೆದಾರರಿಗೆ ಗೇಮಿಂಗ್ ಅನುಭವ ನೀಡಲು ಮುಂದಾಗಿದೆ. ಅದೂ ಕೂಡ ಸಂಪೂರ್ಣ ಉಚಿತವಾಗಿ.

ಹೌದು ಈ ಗೇಮಿಂಗ್ ಆ್ಯಪ್ ಬಳಕೆ ಮಾಡಲು ಬಳಕೆದಾರರು ಯಾವುದೇ ರೀತಿಯ ಶುಲ್ಕ ಪಾವತಿ ಮಾಡಬೇಕಿಲ್ಲ.  ಈ ಮೂಲಕ ಕೋಟ್ಯಾಂತರ ಜನರು ತಮ್ಮ ಸ್ಮಾರ್ಟ್​ಫೋನ್ ಮೂಲಕ ಉಚಿತವಾಗಿ ಗೇಮ್​ ಆಡಬಹುದಾಗಿದೆ. ಸದ್ಯಕ್ಕೆ ಆ್ಯಂಡ್ರಾಯ್ಡ್​​  ಫೋನ್​ಗಳಿಗೆ ಮಾತ್ರ ಈ ಆ್ಯಪ್  ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಐಒಸ್ ಗೂ ಈ ಸೌಲಭ್ಯ ಒದಗಿಸಲಿದೆ. 

ಕಳೆದ 18 ತಿಂಗಳುಗಳಿಂದ ದಕ್ಷಿಣ ಅಮೆರಿಕದ ದೇಶಗಳಲ್ಲಿ ಈ ಆ್ಯಪ್ ಅನ್ನು ಸಿದ್ದಪಡಿಸಲಾಗುತ್ತಿತ್ತು. ಇದೇ ಜೂನ್ ನಲ್ಲಿ ಈ ಆ್ಯಪ್ ಬಿಡುಗಡೆಯಾಗಲಿದ್ದು, ಆರಂಭದಲ್ಲಿ ಆ್ಯಂಡ್ರಾಯ್ಡ್ ವರ್ಷನ್ ನಲ್ಲಿ ಬಿಡುಗಡೆಯಾಗಲಿದೆ. ಬಳಿಕ ಐಒಎಸ್ ನಲ್ಲೂ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಹಾಲಿ ಕೊರೋನಾ ಲಾಕ್ ಡೌನ್ ನಿಂದಾಗಿ ಇಡೀ ವಿಶ್ವವೇ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಹೀಗಾಗಿ ಜನ ಸಮಯ ಕಳೆಯಲು ಮೊಬೈಲ್ ಗಳಲ್ಲಿ ಹೆಚ್ಚಾಗಿ ಗೇಮ್ ಗಳ ಮೊರೆ ಹೋಗುತ್ತಿದ್ದಾರೆ. ಈ ಹೊತ್ತಲ್ಲಿ ಫೇಸ್ ಬುಕ್ ಬಿಡುಗಡೆ ಮಾಡಿರುವ ಗೇಮಿಂಗ್ ಆ್ಯಪ್ ಬಳಕೆದಾರರಿಗೆ  ಹೊಸ ಅನುಭವ ನೀಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com