ಗೂಗಲ್ ಮೀಟ್ ಅಪ್ಡೇಟ್: ಏಕಕಾಲಕ್ಕೆ 16 ಮಂದಿ ಪರದೆ ಮೇಲೆ ಕಾಣಲು ಸಾಧ್ಯ! 

ಲಾಕ್ ಡೌನ್ ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಮ್ (ಮನೆಯಿಂದಲೇ ಕೆಲಸ) ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಗೂಗಲ್ ಮೀಟ್ ಅಪ್ ಡೇಟ್ ಆಗಿದೆ. 

ಹೊಸದಾಗಿ 4 ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡಿರುವ ಕಾನ್ಫರೆನ್ಸಿಂಗ್ ಗೂಗಲ್ ಮೀಟ್  ಜೂಮ್-ಮಾದರಿಯ ಗ್ಯಾಲರಿ ಪರದೆಯನ್ನೂ ಹೊಂದಿದೆ. 

ಅಪ್ ಡೇಟ್ ಗೂ ಮುನ್ನ ಗೂಗಲ್ ಮೀಟ್ ನ ಪರದೆಯಲ್ಲಿ ಏಕಕಾಲಕ್ಕೆ ಕೇವಲ 4 ಜನರಷ್ಟೇ ಕಾಣಲು ಸಾಧ್ಯವಾಗುತ್ತಿತ್ತು. ಆದರೆ ಈಗ ಏಕಕಾಲದಲ್ಲಿ 16 ಜನರನ್ನು ಕಾಣಲು ಸಾಧ್ಯವಿದೆ. 

ದೀರ್ಘಾವಧಿಯ ಆನ್ ಲೈನ್ ಸಭೆಗಳಿಗಾಗಿ ಇನ್ನೂ ಹೆಚ್ಚಿನ ಅಪ್ ಡೇಟ್ ಗಳು ಬರಲಿವೆ ಎಂದು ಗೂಗಲ್ ಮೀಟ್, ವಾಯ್ಸ್ ಕ್ಯಾಲೆಂಡರ್ ನ ಉತ್ಪನ್ನ ನಿರ್ವಹಣೆಯ ನಿರ್ದೇಕರಾದ ಸ್ಮಿತಾ ಹಶೀಮ್ ಹೇಳ್ದಿದಾರೆ. 

ಗೂಗಲ್ ಮೀಟ್ ನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವುದಕ್ಕೆ, ವಿಡಿಯೋವನ್ನು ಸ್ವಯಂ ಚಾಲಿತವಾಗಿ ಹೊಂದಿಸಿಕೊಳ್ಳುವುದಕ್ಕೆ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ. 

ಸದ್ಯಕ್ಕೆ ಈ ಅಪ್ ಡೇಟೆಡ್ ಸೌಲಭ್ಯಗಳೆಲ್ಲವೂ ಮೊಬೈಲ್ ಬಳಕೆದಾರಿಗೆ ಲಭ್ಯವಾಗಲಿದೆ, ಮುಂದಿನ ದಿನಗಳಲ್ಲಿ ವೆಬ್ ಬಳಕೆದಾರರಿಗೂ ಸಹ ಈ ವೈಶಿಷ್ಟ್ಯ ಲಭ್ಯವಿರಲಿದೆ.
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com