ಲಾಕ್ ಡೌನ್, ನಿರ್ಬಂಧ ಸಡಿಲಿಕೆ ಮಾಡದಿದ್ದಲ್ಲಿ ಮೇ ಅಂತ್ಯದ ವೇಳೆಗೆ 4 ಕೋಟಿ ಜನರ ಕೈಲಿ ಮೊಬೈಲ್ ಇರಲ್ಲ! 

ಲಾಕ್ ಡೌನ್ ಪರಿಣಾಮ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಸ್ಥಗಿತಗೊಂಡಿದ್ದು, ಮೇ.03 ರ ನಂತರ ಲಾಕ್ ಡೌನ್ ತೆರವುಗೊಳಿಸದೇ ಇದ್ದರೆ ಮೇ ತಿಂಗಳಾಂತ್ಯಕ್ಕೆ 4 ಕೋಟಿ ಜನರ ಕೈಲಿ ಮೊಬೈಲ್ ಇರುವುದಿಲ್ಲ ಎಂದು ಐಸಿಇಎ ಹೇಳಿದೆ. 
ಮೊಬೈಲ್ ಫೋನ್ (ಸಂಗ್ರಹ ಚಿತ್ರ)
ಮೊಬೈಲ್ ಫೋನ್ (ಸಂಗ್ರಹ ಚಿತ್ರ)

ನವದೆಹಲಿ: ಲಾಕ್ ಡೌನ್ ಪರಿಣಾಮ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಸ್ಥಗಿತಗೊಂಡಿದ್ದು, ಮೇ.03 ರ ನಂತರ ಲಾಕ್ ಡೌನ್ ತೆರವುಗೊಳಿಸದೇ ಇದ್ದರೆ ಮೇ ತಿಂಗಳಾಂತ್ಯಕ್ಕೆ 4 ಕೋಟಿ ಜನರ ಕೈಲಿ ಮೊಬೈಲ್ ಇರುವುದಿಲ್ಲ ಎಂದು ಐಸಿಇಎ ಹೇಳಿದೆ. 

ಈಗಿನ ಮಾಹಿತಿಯ ಪ್ರಕಾರ, ಮೊಬೈಲ್ ಫೋನ್ ಗಳು ಹಾಳಾಗಿ, ಮುರಿದುಹೋಗಿರುವ ಪರಿಣಾಮ ಈಗಾಗಲೇ 2.5 ಕೋಟಿ ಗ್ರಾಹಕರ ಕೈಲಿ ಮೊಬೈಲ್ ಇಲ್ಲದಂತಾಗಿದೆ ಎಂದು ಇಂಡಿಯಾ ಸೆಲ್ಯುಲರ್, ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಮಾಹಿತಿ ನೀಡಿದೆ. 

ಮೊಬೈಲ್ ದುರಸ್ತಿಗಳಿಗಾಗಿ ಅಗತ್ಯವಿರುವ ಕಾಂಪೊನೆಂಟ್ ಗಳು ಲಭ್ಯವಾಗುತ್ತಿಲ್ಲ, ಇತ್ತ ಹೊಸ ಮೊಬೈಲ್ ಗಳನ್ನು ಖರೀದಿಸಲೂ ಲಾಕ್ ಡೌನ್ ನಿಂದ ಸಾಧ್ಯವಾಗುತ್ತಿಲ್ಲ ಪರಿಣಾಮವಾಗಿ ಲಾಕ್ ಡೌನ್ ತೆರವುಗೊಳಿಸದೇ ಇದ್ದಲ್ಲಿ ಮೇ ತಿಂಗಳಾಂತ್ಯಕ್ಕೆ ಮೊಬೈಲ್ ಇಲ್ಲದೇ ಇರುವವರ ಸಂಖ್ಯೆ 4 ಕೋಟಿಗೆ ತಲುಪಲಿದೆ ಎಂದು ಐಸಿಇಎ ಅಂದಾಜಿಸಿದೆ. 

ಲಾಕ್ ಡೌನ್ ವೇಳೆಯಲ್ಲಿ ಟೆಲಿಕಾಂ, ಇಂಟರ್ ನೆಟ್, ಐಟಿ ಸೇವೆಗಳು ಮಾತ್ರ ಲಭ್ಯವಿದ್ದು ಮೊಬೈಲ್ ಹ್ಯಾಂಡ್ ಸೆಟ್ ಗಳ ಮಾರಾಟಕ್ಕೆ ಅನುಮತಿ ನೀಡಲಾಗಿಲ್ಲ. 

ಐಸಿಇಎ ಮಾಹಿತಿಯ ಪ್ರಕಾರ ಆಪಲ್, ಶಿಯೋಮಿ ಸೇರಿದಂತೆ ಮುಂಚೂಣಿಯಲ್ಲಿರುವ ಮೊಬೈಲ್ ಸಂಸ್ಥೆಗಳು ಪ್ರತಿ ತಿಂಗಳು 2.5 ಕೋಟಿ ಹೊಸ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡುತ್ತಿದ್ದವು.ಈ ಪೈಕಿ ಹೆಚ್ಚಿನವು ಹಳೆಯ ಮೊಬೈಲ್ ಹಾಳಾದ ಕಾರಣ ಖರೀದಿಸಲ್ಪಡುತ್ತಿದ್ದ ಹೊಸ ಮೊಬೈಲ್ ಗಳಾಗಿರುತ್ತಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com