ಫೇಸ್ ಬುಕ್ ನಲ್ಲಿ ಕಾಣಿಸುತ್ತಿದ್ದ 'Create room' ಆಯ್ಕೆ ಏನು, ಉಪಯೋಗ ಹೇಗೆ ಎಂಬುದಕ್ಕೆ ಇಲ್ಲಿದೆ ಉತ್ತರ

ಫೇಸ್ ಬುಕ್ ಬಳಕೆದಾರರಿಗೆ ಇತ್ತೀಚಿನ ದಿನಗಳಲ್ಲಿ ಕ್ರಿಯೇಟ್ ರೂಮ್ (Create room) ಪ್ರಾರಂಭವಾಗಿದೆ. 
ಫೇಸ್ ಬುಕ್ ನಲ್ಲಿ ಕಾಣಿಸುತ್ತಿದ್ದ 'Create room' ಆಯ್ಕೆ ಏನು, ಉಪಯೋಗ ಹೇಗೆ ಎಂಬುದಕ್ಕೆ ಇಲ್ಲಿದೆ ಉತ್ತರ

ನವದೆಹಲಿ: ಫೇಸ್ ಬುಕ್ ಬಳಕೆದಾರರಿಗೆ ಇತ್ತೀಚಿನ ದಿನಗಳಲ್ಲಿ ಕ್ರಿಯೇಟ್ ರೂಮ್ (Create room) ಪ್ರಾರಂಭವಾಗಿದೆ. 

ಈ ಬಗ್ಗೆ ಹಲವಾರು ಪ್ರಶ್ನೆಗಳು ಪ್ರಾರಂಭದಲ್ಲಿ ಗ್ರಾಹಕರಿಗೆ ಮೂಡಿತ್ತು. ಇದಕ್ಕೆ ಸೂಕ್ತ ಉತ್ತರ ಇಲ್ಲಿದೆ. 

ಜಾಗತಿಕವಾಗಿ ತನ್ನ ಒಡೆತನದ ಆಪ್ ಗಳಲ್ಲಿ ಒಟ್ಟು 3.14 ಬಿಲಿಯನ್ ಜನರಿದ್ದು ಈ ಆಪ್ ಗಳ ಬಳಕೆದಾರರನ್ನು ವಾಟ್ಸ್ ಆಪ್ ವೆಬ್ ಸಹಾಯದಿಂದ ಮೆಸೆಂಜರ್ ರೂಮ್ ಮೂಲಕ ಒಟ್ಟಿಗೆ ತರುವ ಪ್ರಯತ್ನ ಇದಾಗಿದೆ. 

ವಾಟ್ಸ್ ಆಪ್ ವೆಬ್ ನಲ್ಲಿ ಮೆನು ವಿಭಾಗದಲ್ಲಿ ಕ್ರಿಯೇಟ್ ಎ ರೂಮ್ ಎಂಬ ಆಯ್ಕೆ ಇದೆ ಅದನ್ನು ಬಳಕೆ ಮಾಡುವ ಮೂಲಕ ಸಮಯದ ಮಿತಿ ಇಲ್ಲದೇ ವಾಟ್ಸ್ ಆಪ್ ಡೆಸ್ಕ್ ಟಾಪ್ ಮೂಲಕ 50 ಜನರೊಂದಿಗೆ ಗ್ರೂಪ್ ವಿಡಿಯೋ ಕಾಲ್ ಮಾಡಬಹುದಾಗಿದೆ. 

ಬಳಕೆದಾರರಿಗೆ ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕಾಲ್ ಮಾಡುವುದಕ್ಕಾಗಿ ಮೆಸೆಂಜರ್ ರೂಮ್ಸ್ ಸಹಕಾರಿಯಾಗಲಿದೆ. ಈಗ ಲ್ಯಾಪ್ ಟಾಪ್ ಹಾಗೂ ಕಂಪ್ಯೂಟರ್ ಗಳಲ್ಲಿ ಮಾತ್ರ ಲಭ್ಯವಿರುವ ಈ ಸೌಲಭ್ಯ ಮೊಬೈಲ್ ನಲ್ಲಿ ಈ ಆಯ್ಕೆ ಇನ್ನಷ್ಟೇ ಜಾರಿಯಾಗಬೇಕಿದೆ.

ಜೂಮ್ ಗೆ ಪರ್ಯಾಯವಾಗಿ ಫೇಸ್ ಬುಕ್ ವಿಡಿಯೋ ಕಾನ್ಫರೆನ್ಸಿಂಗ್ ಟೂಲ್ ಮೆಸೆಂಜರ್ ರೂಮ್ಸ್ ನ್ನು ಮೇ ತಿಂಗಳಲ್ಲಿ ಲೋಕಾರ್ಪಣೆಗೊಳಿಸಿತ್ತು. ಫೇಸ್ ಬುಕ್ ಖಾತೆ ಇಲ್ಲದವರೂ ಸಹ ಮೆಸೆಂಜರ್ ರೂಮ್ಸ್ ಗೆ ಸೇರ್ಪಡೆಯಾಗಬಹುದಾಗಿದೆ ಹಾಗೂ ಇದರಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಫೇಸ್ ಬುಕ್ ಲೈವ್ ನಲ್ಲಿ ಹಂಚಿಕೊಳ್ಳಬಹುದಾಗಿದೆ. ಫೇಸ್‌ಬುಕ್‌ ಗೆಳೆಯರು ಸೇರಿದಂತೆ Facebookನ ಆ್ಯಪ್ಗಳಾದ ವಾಟ್ಸಾಪ್, ಇನ್ಸ್ಟಾಗ್ರಾಮ್ ಮೂಲಕ ಕೂಡ ನೀವು ಒಟ್ಟಾರೆಯಾಗಿ ಒಂದೇ ಸಮಯಕ್ಕೆ 50 ಜನ ಲೈವ್ ಹೋಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com