ಅಂಡರ್ ಡಿಸ್ಪ್ಲೇ ಸೆಲ್ಫಿ ಕ್ಯಾಮರಾ ಜೊತೆಗೆ ಬರಲಿದೆ ಗೂಗಲ್ ಪಿಕ್ಸಲ್ 6 ಮೊಬೈಲ್
ಪಿಕ್ಸಲ್ 5 ಬಳಿಕ ಗೂಗಲ್ ಪಿಕ್ಸಲ್ 6 ಸ್ಮಾರ್ಟ್ ಫೋನ್ ನ್ನು ಮುಂದಿನ ವರ್ಷ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದ್ದು, ಪರದೆಯ ಕೆಳಗೆ ಸೆಲ್ಫಿ ಕ್ಯಾಮರಾ ಇರುವುದು ಇದರ ವಿಶೇಷತೆಯಾಗಿದೆ.
Published: 28th December 2020 07:45 PM | Last Updated: 28th December 2020 07:45 PM | A+A A-

ಅಂಡರ್ ಡಿಸ್ಪ್ಲೇ ಸೆಲ್ಫಿ ಕ್ಯಾಮರಾ ಜೊತೆಗೆ ಬರಲಿದೆ ಗೂಗಲ್ ಪಿಕ್ಸಲ್ 6 ಮೊಬೈಲ್
ಪಿಕ್ಸಲ್ 5 ಬಳಿಕ ಗೂಗಲ್ ಪಿಕ್ಸಲ್ 6 ಸ್ಮಾರ್ಟ್ ಫೋನ್ ನ್ನು ಮುಂದಿನ ವರ್ಷ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದ್ದು, ಪರದೆಯ ಕೆಳಗೆ ಸೆಲ್ಫಿ ಕ್ಯಾಮರಾ ಇರುವುದು ಇದರ ವಿಶೇಷತೆಯಾಗಿದೆ.
ಝೆಡ್ ಟಿಇ ಈಗಾಗಲೇ ಪ್ರದೆ ಕೆಳಗಿನ ಸೆಲ್ಫಿ ಕ್ಯಾಮರಾ ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದು, ಓಪ್ಪೋ, ಶಿಯೋಮಿ, ಮೂಲಮಾದರಿಗಳನ್ನು ಪ್ರದರ್ಶಿಸಿದ್ದರೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಝೆಡ್ ಫೋಲ್ಡ್ 3 2021 ರ ಉತ್ತರಾರ್ಧದಲ್ಲಿ ಮಾರುಕಟ್ಟೆಗೆ ಬರಲಿದೆ.
ಪಿಕ್ಸೆಲ್ 5 ರಲ್ಲಿದ್ದ ಜಾಗದಲ್ಲಿಯೇ ಪ್ರೈಮರಿ ಕ್ಯಾಮರಾ ಇರಲಿದ್ದು, ಕ್ಯಾಮರಾ ಮಾಡ್ಯೂಲ್ ನಲ್ಲಿ ಎರಡು ಸೆನ್ಸಾರ್ ಗಳು ಹಾಗೂ ಒಂದು ಎಲ್ಇಡಿ ಫ್ಲಾಷ್ ಇರಲಿದೆ. ಗೂಗಲ್ ಪಿಕ್ಸ್ 6 6.0 ಇಂಚಿನ ಪೂರ್ಣ-ಹೆಚ್+(1080x2340 ಪಿಕ್ಸೆಲ್ಸ್) ಒಎಲ್ಇಡಿ ಸ್ಕ್ರೀನ್ 19:5:9 ಆಸ್ಪೆಕ್ಟ್ ರೇಷಿಯೋ ಹೊಂದಿದೆ.
ಆಕ್ಟಾ-ಕೋರ್ ಸ್ನ್ಯಾಪ್ ಡ್ರಾಗನ್ ಪ್ರೊಸೆಸರ್ 8 ಜಿಬಿ ರ್ಯಾಮ್, 128 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಆಂಡ್ರಾಯ್ಡ್ 11 ಚಾಲಿತವಾಗಿದ್ದು, 4,080 ಎಂಎಎಚ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.