ಸೋನಿ ಇನ್-ಇಯರ್ ವೈರ್‌ಲೆಸ್ ನಾಯ್ಸ್ ಕ್ಯಾನ್ಸಲೇಶನ್ ಹೆಡ್‌ಫೋನ್‌ ವಿಶೇಷತೆಗಳು!

ಸೋನಿ ಇಂಡಿಯಾ ತನ್ನ ಇತ್ತೀಚಿನ ಇನ್-ಇಯರ್ ವೈರ್‌ಲೆಸ್ ನಾಯ್ಸ್ ಕ್ಯಾನ್ಸಲೇಶನ್ ಹೆಡ್‌ಫೋನ್‌ ಅನಾವರಣಗೊಳಿಸಿದೆ. ಈಗ ನೀವು ಯಾವುದೇ ಅಡಚಣೆ ಇಲ್ಲದೆ ಸಂಗೀತವನ್ನು ಕೇಳಬಹುದು.
ಸೋನಿ ಇನ್-ಇಯರ್ ವೈರ್‌ಲೆಸ್ ನಾಯ್ಸ್ ಕ್ಯಾನ್ಸಲೇಶನ್ ಹೆಡ್‌ಫೋನ್‌
ಸೋನಿ ಇನ್-ಇಯರ್ ವೈರ್‌ಲೆಸ್ ನಾಯ್ಸ್ ಕ್ಯಾನ್ಸಲೇಶನ್ ಹೆಡ್‌ಫೋನ್‌

ಸೋನಿ ಇಂಡಿಯಾ ತನ್ನ ಇತ್ತೀಚಿನ ಇನ್-ಇಯರ್ ವೈರ್‌ಲೆಸ್ ಹೆಡ್‌ಫೋನ್‌ಗಳನ್ನು ಅನಾವರಣಗೊಳಿಸಿದೆ. ಈಗ ನೀವು ಯಾವುದೇ ಅಡಚಣೆ ಇಲ್ಲದೆ ಸಂಗೀತವನ್ನು ಕೇಳಬಹುದು. ಹೊಸ WI-1000XM2 ರೂ.21,990 ಕ್ಕೆ ಸಿಗುತ್ತದೆ.

ಈ ವೈರ್‌ಲೆಸ್ ನೆಕ್‌ಬ್ಯಾಂಡ್ ಹೆಡ್‌ಫೋನ್‌ಗಳಲ್ಲಿ ಅತ್ಯಾಧುನಿಕ ನಾಯ್ಸ್ ಕ್ಯಾನ್ಸಲೇಶನ್ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ಮೀಸಲಾದ ಎಚ್‌ಡಿ ನಾಯ್ಸ್ ಕ್ಯಾನ್ಸಲಿಂಗ್ ಪ್ರೊಸೆಸರ್ QN1 ನಿಂದ ಶಕ್ತವಾಗಿರುವ ಇದು, ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿರುವಾಗ 10 ಗಂಟೆಗಳ ಕಾರ್ಯಶಕ್ತಿಯನ್ನು ನೀಡುತ್ತದೆ ಮತ್ತು ತ್ವರಿತ ಚಾರ್ಜ್ ವೈಶಿಷ್ಟ್ಯದೊಂದಿಗೆ ಬರುತ್ತದೆ.

ಆ್ಯಂಗಲ್ಡ್ ಇಯರ್‌ಫೋನ್ ವಿನ್ಯಾಸದೊಂದಿಗೆ ಸ್ಥಿರವಾದ ಬಿಗಿಯಾದ ರಚನೆಯು, ಸುತ್ತಲಿನ ಶಬ್ದವು ಕಿವಿಗೆ ಪ್ರವೇಶಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ, ಮತ್ತು ಇದರ ಡ್ಯುಯಲ್ ನಾಯ್ಸ್ ಸೆನ್ಸಾರ್ ತಂತ್ರಜ್ಞಾನವು ಯಾವುದೇ ಶಬ್ದವನ್ನು ಕ್ಯಾನ್ಸಲ್ ಮಾಡುತ್ತದೆ. ಇದು ಬಿಲ್ಟ್-ಇನ್ ಮೈಕ್ರೊಫೋನ್‌ನೊಂದಿಗೆ ಬರುತ್ತದೆ ಮತ್ತು ಇದು ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸಾ ಜೊತೆ ಹೊಂದಿಕೊಳ್ಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com