ಭಾರತದಲ್ಲಿ ವಿಂಡೋಸ್ 10 ಡಿವೈಸ್ ಗಳಿಗೆ ಬಂತು ಅಮೇಜಾನ್ ಪ್ರೈಮ್ ವಿಡಿಯೋ ಆ್ಯಪ್!

ಭಾರತದಲ್ಲಿ ಮೈಕ್ರೋಸಾಫ್ಟ್ ಸ್ಟೋರ್ ಮೂಲಕ ವಿಂಡೋಸ್ 10 ಡಿವೈಸ್ ಗಳಲ್ಲಿ ಪ್ರೈಮ್ ವಿಡಿಯೋಗಳನ್ನು ಆ್ಯಪ್ ಮೂಲಕವೂ ವೀಕ್ಷಿಸಬಹುದು ಎಂದು ಅಮೇಜಾನ್ ಘೋಷಿಸಿದೆ.
ಅಮೇಜಾನ್ ಪ್ರೈಮ್ ವಿಡಿಯೋ
ಅಮೇಜಾನ್ ಪ್ರೈಮ್ ವಿಡಿಯೋ

ನವದೆಹಲಿ: ಭಾರತದಲ್ಲಿ ಮೈಕ್ರೋಸಾಫ್ಟ್ ಸ್ಟೋರ್ ಮೂಲಕ ವಿಂಡೋಸ್ 10 ಡಿವೈಸ್ ಗಳಲ್ಲಿ ಪ್ರೈಮ್ ವಿಡಿಯೋಗಳನ್ನು ಆ್ಯಪ್ ಮೂಲಕವೂ ವೀಕ್ಷಿಸಬಹುದು ಎಂದು ಅಮೇಜಾನ್ ಘೋಷಿಸಿದೆ.

ವಿಂಡೋಸ್ 10 ನಲ್ಲಿ ಅಮೇಜಾನ್ ಪ್ರೈಮ್ ವಿಡಿಯೋ ಆ್ಯಪ್ ಮೂಲಕ ಗ್ರಾಹಕರು ಪ್ರೈಮ್ ವಿಡಿಯೋ ಕಂಟೆಂಟ್ ನ್ನು ಆನ್ ಲೈನ್ ನಲ್ಲಿ ವೀಕ್ಷಿಸಬಹುದು ಅಥವಾ ಆಫ್ ಲೈನ್ ನಲ್ಲಿ ವೀಕ್ಷಿಸಲು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಡೆಸ್ಕ್ ಟಾಪ್ ಪಿಸಿ, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಗಳಲ್ಲಿ ಮಾತ್ರ ಈ ಆ್ಯಪ್ ಕಾರ್ಯನಿರ್ವಹಣೆ ಮಾಡಲಿದ್ದು, ಪ್ರೈಮ್ ವಿಡಿಯೋ ವೆಬ್ ಸೈಟ್ ನ ಮಾದರಿಯಲ್ಲೇ ಸ್ಟ್ರೀಮಿಂಗ್ ಅನುಭವ ಇರಲಿದೆ.

ವಿಂಡೋಸ್ 10 ಡಿವೈಸ್ ನ ಮೈಕ್ರೋಸಾಫ್ಟ್ ಸ್ಟೋರ್ ನಲ್ಲಿ ಈ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದಕ್ಕೂ ಮುನ್ನ ಅಮೇಜಾನ್ ಪ್ರೈಮ್ ವಿಡಿಯೋ ಪ್ರೈಮ್ ಸದಸ್ಯತ್ವ ಹೊಂದಿರುವವರಿಗೆ ಬೇರೆ ಬೇರೆ ಲೊಕೇಶನ್ ಗಳಿಂದ ಮೂವಿ, ಟಿವಿ ಶೋಗಳನ್ನು ವೀಕ್ಷಿಸಲು ವಾಚ್ ಪಾರ್ಟಿ ಫೀಚರ್ ನ್ನು ಒದಗಿಸಿತ್ತು. ಈ ಮೂಲಕ ಓರ್ವ ಗ್ರಾಹಕ ಶೋಗಳನ್ನು ವೀಕ್ಷಿಸುತ್ತಲೇ ಗರಿಷ್ಟ 100 ಜನ ಸ್ನೇಹಿತರೊಂದಿಗೆ ಚಾಟ್ ಮಾಡಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com