ಜೂಮ್ ಗೆ ಜಿಯೋ ಮೀಟ್ ಪೈಪೋಟಿ: ಜಿಯೋದಿಂದ ಅನ್ ಲಿಮಿಟೆಡ್ ಉಚಿತ ಕಾನ್ಫರೆನ್ಸಿಂಗ್ ಆ್ಯಪ್! 

ಫೇಸ್ ಬುಕ್, ಇಂಟೆಲ್ ಜೊತೆಗೆ ಒಪ್ಪಂದ ಮಾಡಿಕೊಂಡು, ಬಿಲಿಯನ್ ಡಾಲರ್ ಗಳ ಹೂಡಿಕೆಯೊಂದಿಗೆ ಡಿಜಿಟಲ್ ಉದ್ಯಮಕ್ಕೆ ಕಾಲಿಟ್ಟಿರುವ ಮುಖೇಶ್ ಅಂಬಾನಿಯ ರಿಲಾಯನ್ಸ್ ಈಗ ಚೀನಾದ ಖ್ಯಾತ ಕಾನ್ಫರೆನ್ಸಿಂಗ್ ಆ್ಯಪ್ ಜೂಗ್ ಗೆ ಪೈಪೋಟಿ ನೀಡಲು ಜಿಯೋ ಮೀಟ್ ನ್ನು ಬಿಡುಗಡೆಗೊಳಿಸಿದೆ.
ಜೂಮ್ ಗೆ ಜಿಯೋ ಮೀಟ್ ಪೈಪೋಟಿ: ಜಿಯೋದಿಂದ ಅನ್ ಲಿಮಿಟೆಡ್ ಉಚಿತ ಕಾನ್ಫರೆನ್ಸಿಂಗ್ ಆ್ಯಪ್! 

ನವದೆಹಲಿ: ಫೇಸ್ ಬುಕ್, ಇಂಟೆಲ್ ಜೊತೆಗೆ ಒಪ್ಪಂದ ಮಾಡಿಕೊಂಡು, ಬಿಲಿಯನ್ ಡಾಲರ್ ಗಳ ಹೂಡಿಕೆಯೊಂದಿಗೆ ಡಿಜಿಟಲ್ ಉದ್ಯಮಕ್ಕೆ ಕಾಲಿಟ್ಟಿರುವ ಮುಖೇಶ್ ಅಂಬಾನಿಯ ರಿಲಾಯನ್ಸ್ ಈಗ ಚೀನಾದ ಖ್ಯಾತ ಕಾನ್ಫರೆನ್ಸಿಂಗ್ ಆ್ಯಪ್ ಜೂಗ್ ಗೆ ಪೈಪೋಟಿ ನೀಡಲು ಜಿಯೋ ಮೀಟ್ ನ್ನು ಬಿಡುಗಡೆಗೊಳಿಸಿದೆ.

ಹಲವು ವಿಷಯಗಳಲ್ಲಿ ಜೂಮ್ ಗಿಂತಲೂ ಅತ್ಯಾಧುನಿಕ ಆಯ್ಕೆ, ಸೌಲಭ್ಯಗಳನ್ನು ಹೊಂದಿರುವ ಜಿಯೋ ಮೀಟ್ ನ್ನು ಗುರುವಾರ ಬೀಟಾ ಟೆಸ್ಟಿಂಗ್ ನಂತರ ಬಿಡುಗಡೆ ಮಾಡಲಾಗಿದ್ದು, ಆಂಡ್ರಾಯ್ಡ್, ಐಒಎಸ್, ವಿಂಡೋಸ್, ಮ್ಯಾಕ್ಒಎಸ್ ಹಾಗೂ ವೆಬ್ ಗಳಲ್ಲಿ ಲಭ್ಯವಿದೆ. ಬಿಡುಗಡೆಯಾದ ಕೇವಲ 48 ಗಂಟೆಗಳಲ್ಲೇ ಪ್ಲೇ ಸ್ಟೋರ್ ನಲ್ಲಿ 5 ಲಕ್ಷ ಡೌನ್ ಆಗಿದೆ. ಸಂಸ್ಥೆಯ ವೆಬ್ ಸೈಟ್ ನೀಡಿರುವ ಮಾಹಿತಿಯ ಪ್ರಕಾರ, ಜಿಯೋ ಮೀಟ್ ಹೆಚ್ ಡಿ ಆಡಿಯೋ ಹಾಗೂ ವಿಡಿಯೋ ಕರೆ ಗುಣಮಟ್ಟವನ್ನು ಸಪೋರ್ಟ್ ಮಾಡಲಿದ್ದು, ಏಕಕಾಲಕ್ಕೆ 100 ಪ್ರತಿನಿಧಿಗಳನ್ನೊಳಗೊಂಡ ಕಾನ್ಫರೆನ್ಸ್ ಕರೆಯನ್ನು ಮಾಡಬಹುದಾಗಿದೆ ಅಥವಾ ಸಭೆಯನ್ನು ನಿಗದಿಪಡಿಸಬಹುದಾಗಿದೆ. 

ಜಿಯೋ ಮೀಟ್ ಗೂ ಜೂಮ್ ಗೂ ಇರುವ ಪ್ರಮುಖ ವ್ಯತ್ಯಾಸಗಳು ಹೀಗಿವೆ

  • ಜೂಮ್ ನಲ್ಲಿ 40 ನಿಮಿಷಗಳ ಗರಿಷ್ಟ ಸಮಯ ನಿಗದಿಪಡಿಸಿದ್ದರೆ, ಜಿಯೋ ಮೀಟ್ ನಲ್ಲಿ ಯಾವುದೇ ಕಾಲಮಿತಿ ಇಲ್ಲದೇ 24 ಗಂಟೆಗಳ ವರೆಗೆ ಅನಿಯಮಿತ ಸಭೆಗಳನ್ನು ನಡೆಸಬಹುದಾಗಿದೆ. 
  • ಜಿಯೋ ಮೀಟ್ ನಲ್ಲಿ ಸಭೆ ನಡೆಸುತ್ತಿರುವಾಗಲೇ ಕರೆಯನ್ನು ಅಂತ್ಯಗೊಳಿಸದೇ ಮತ್ತೊಂದು ಮೊಬೈಲ್ ಗೆ ಅದನ್ನು ವರ್ಗಾವಣೆ ಮಾಡುವ ಸೌಲಭ್ಯವಿದೆ. 
  • ಇ-ಮೇಲ್ ಅಥವಾ ಮೊಬೈಲ್ ನಂಬರ್ ಮೂಲಕ ಸುಲಭ ಲಾಗಿನ್ ಸೌಲಭ್ಯವನ್ನು ಜಿಯೋ ಮೀಟ್ ಒದಗಿಸುತ್ತದೆ.  
  • ಪಾಸ್ವರ್ಡ್ ಹಾಗೂ ಸಭೆಗಳನ್ನು ಸಂಪೂರ್ಣವಾಗಿ ಸುರಕ್ಷಿತವಾಗಿಡುವುದಾಗಿ ಜಿಯೋ ಮೀಟ್ ಸಂಸ್ಥೆ ತಿಳಿಸಿದೆ.
  • 40 ನಿಮಿಷಗಳಿಗಿಂತ ಮೇಲ್ಪಟ್ಟ ಸಭೆಗಳಿಗೆ ಜೂಮ್ ಆಪ್ ನಲ್ಲಿ ತಿಂಗಳಿಗೆ 15 ಅಮೆರಿಕನ್ ಡಾಲರ್ ಶುಲ್ಕ ವಿಧಿಸಲಾಗುತ್ತದೆ. ಇದು ವಾರ್ಷಿಕವಾಗಿ 180 ಡಾಲರ್ ನಷ್ಟಿದ್ದು, ಜಿಯೋ ಮೀಟ್ ನಲ್ಲಿ ಅನಿಯಮಿತ ಸಭೆಗಳನ್ನು ಉಚಿತವಾಗಿ 24 ಗಂಟೆಗಳವರೆಗೆ ನಡೆಸುವುದರಿಂದ ವಾರ್ಷಿಕವಾಗಿ 13,500 ರೂ.ಗಳನ್ನು ಉಳಿಸಬಹುದಾಗಿದೆ.
  • ಜಿಯೋ ಮೀಟ್ ನಲ್ಲಿ ವೇಯ್ಟಿಂಗ್ ರೂಮ್ ಸೌಲಭ್ಯವಿದ್ದು, ಯಾವುದೇ ವ್ಯಕ್ತಿಯೂ ಸಹ ಅನುಮತಿ ಇಲ್ಲದೇ ಮೀಟಿಂಗ್ ಗೆ ಪ್ರವೇಶ ಪಡೆಯುವುದಕ್ಕೆ ಸಾಧ್ಯವಿಲ್ಲ.
  • 5 ಡಿವೈಸ್ ಗಳವರೆಗೆ ಲಾಗ್ ಇನ್ ಸಪೋರ್ಟ್ ಸಹ ಜಿಯೋ ಮೀಟ್ ನಲ್ಲಿ ದೊರೆಯಲಿದ್ದು, ಕರೆ ಮಧ್ಯದಲ್ಲೇ ಬೇರೆ ಡಿವೈಸ್ ಗೆ ವರ್ಗಾವಣೆಯಾಗಬಹುದಾಗಿದೆ. ಜೊತೆಗೆ ಸೇಫ್ ಡ್ರೈವಿಂಗ್ ಮೋಡ್ ಆಯ್ಕೆಯನ್ನೂ ಜಿಯೋ ಮೀಟ್ ನಲ್ಲಿ ನೀಡಲಾಗಿದೆ.
  • ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೆಮಿನಾರ್ ಗಳಾನ್ನೂ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನೂ ಇದರಲ್ಲಿ ಆಯೋಜಿಸಬಹುದಾಗಿದೆ ಎಂದು ಜಿಯೋ ಸಂಸ್ಥೆ ತಿಳಿಸಿದೆ.
  • ಜೂಮ್ ನಲ್ಲಿ ಪಾರ್ಟಿಸಿಪೆಂಟ್ಸ್ ವಿಡಿಯೋವನ್ನು ವಿಸ್ತರಿಸುವ ಅವಕಾಶವಿಲ್ಲ. ಆದರೆ ಜಿಯೋ ಮೀಟ್ ನಲ್ಲಿ ಈ ಸೌಲಭ್ಯಗಳನ್ನು ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com