ಬಿಎಸ್ಎನ್ಎಲ್ ನಿಂದ ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆ !

ಟೆಲಿಕಾಂ ಕಂಪನಿಗಳು ಹಲವು ವಿಶೇಷ ಯೋಜನೆಗಳು ನೀಡುವ ಮೂಲಕ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸಲು ಪ್ರಯತ್ನಿಸುತ್ತಿವೆ . ಇದೇ ರೀತಿ ಬಿಎಸ್ಎನ್ಎಲ್ ಕೂಡ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲು ಮುಂದಾಗಿದೆ.

Published: 12th July 2020 07:50 PM  |   Last Updated: 12th July 2020 09:44 PM   |  A+A-


BSNL-Covid 19 Lock down

ಬಿಎಸ್ಎನ್ಎಲ್ (ಸಂಗ್ರಹ ಚಿತ್ರ)

Posted By : Srinivasamurthy VN
Source : UNI

ನವದೆಹಲಿ: ಟೆಲಿಕಾಂ ಕಂಪನಿಗಳು ಹಲವು ವಿಶೇಷ ಯೋಜನೆಗಳು ನೀಡುವ ಮೂಲಕ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸಲು ಪ್ರಯತ್ನಿಸುತ್ತಿವೆ . ಇದೇ ರೀತಿ ಬಿಎಸ್ಎನ್ಎಲ್ ಕೂಡ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲು ಮುಂದಾಗಿದೆ.

ಬಿಎಸ್ಎನ್ಎಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಹಲವಾರು ರೀಚಾರ್ಜ್ ಯೋಜನೆ ಜಾರಿಗೊಳಿಸಿದೆ 97 ರುಪಾಯಿಗಳಿಂದ 1,999 ರವರೆಗೆ ವೋಚರ್ ಗಳನ್ನು ಬಿಡುಗಡೆ ಮಾಡಿದೆ. ಈ ಎಲ್ಲಾ ಯೋಜನೆಗಳನ್ನು ಈಗಿರುವ ಯೋಜನೆಯೊಂದಿಗೆ ಮರುಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

97 , 98 , 118 , 187 , 247 , 319 , 399 , 429 , 485 , 666 , 699 , 997 , 1,699 , ಮತ್ತು 1,999 ರುಪಾಯಿಯ ಪ್ರಿಪೇಯ್ಡ್ ಯೋಜನೆಗಳನ್ನು ನೀಡಲಾಗಿದೆ. ಬಳಕೆದಾರರ ಅಸ್ತಿತ್ವದಲ್ಲಿರುವ ಯೋಜನೆಯ ಅಂತ್ಯದ ನಂತರ ಈ ಯೋಜನೆಗಳು ಸ್ವಯಂಚಾಲಿತವಾಗಿ ಸಕ್ರಿಯವಾಗಲಿದೆ.

ಕಂಪನಿಯು ಈ ಯೋಜನೆಗಳನ್ನು ಎಲ್ಲಾ ವಲಯಗಳಲ್ಲಿ ಬಿಡುಗಡೆ ಮಾಡಿದೆ. ಇದಲ್ಲದೆ ಇತ್ತೀಚೆಗೆ ಕಂಪನಿಯು 94 ಮತ್ತು 95 ರುಪಾಯಿಗಳ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ಗ್ರಾಹಕರು 3 ಜಿಬಿ ಡೇಟಾ ಪಡೆಯಲಿದ್ದಾರೆ. 

Stay up to date on all the latest ಗ್ಯಾಡ್ಜೆಟ್ಸ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp