ಏಸರ್ ನಿಂದ ಹೊಸ ಸ್ವಿಫ್ಟ್ 3 ನೋಟ್ ಬುಕ್ ಬಿಡುಗಡೆ: ಬೆಲೆ, ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ 

ಏಸರ್ ಇಂಡಿಯಾ ಜೂ.01 ರಂದು ಲೈಟ್ ನೋಟ್ ಬುಕ್ ಸರಣಿಯ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. 

ಹೊಸದಾಗಿ ಬಿಡುಗಡೆಯಾಗಿರುವ ಏಸರ್ ಸ್ವಿಫ್ಟ್ 3 ಯ ಇತ್ತೀಚಿನ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಎಎಮ್‌ಡಿ ರೈಜೆನ್ 4000 ಸೀರೀಸ್ ಮೊಬೈಲ್ ಪ್ರೊಸೆಸರ್‌ ನ್ನು ರೇಡಿಯನ್ ಗ್ರಾಫಿಕ್ಸ್ ನೊಂದಿಗೆ ಹೊಂದಿದೆ. ಜೊತೆಗೆ 1 ಟಿಬಿ ಎಸ್ಎಸ್ ಡಿ ಹಾಗೂ 16 ಜಿಬಿ ರ್ಯಾಮ್ ನ್ನು ಹೊಂದಿದೆ. 1.2 ಕೆಜಿ ತೂಕವಿದ್ದು, ಸುಲಭವಾಗಿ ಕೊಂಡೊಯ್ಯೊಬಹುದಾಗಿದೆ ಎಂದು ಏಸರ್ ಇಂಡಿಯಾದ ಕನ್ಸ್ಯೂಮರ್ ಬ್ಯುಸಿನೆಸ್ ಹೆಡ್ ಚಂದ್ರಹಾಸ್ ಪಾಣಿಗ್ರಾಹಿ ತಿಳಿಸಿದ್ದಾರೆ.   

ಹೆಚ್ ಡಿ ಐಪಿಎಸ್ ಡಿಸ್ಪ್ಲೇ ಹೊಂದಿದ್ದು, ಡ್ಯುಯಲ್ ಬ್ಯಾಂಡ್ ವೈಫೈ-6 ವೈಶಿಷ್ಟ್ಯ ಸಾಮಾನ್ಯವಾಗಿ ಲಭ್ಯವಾಗುವುದಕ್ಕಿಂತ 3 ಪಟ್ಟು ಹೆಚ್ಚಿನ ನೆಟ್ ವರ್ಕ್ ಸಿಗಲಿದೆ. ವಿಂಡೋಸ್ 10, ಮೈಕ್ರೋ ಸಾಫ್ಟ್ ಆಫೀಸ್ 2019, ಡಿಟಿಎಸ್ ಆಡಿಯೋ ಹಾಗೂ ಅತ್ಯುತ್ತಮ ಧ್ವನಿ ಅನುಭವ ಲಭ್ಯವಾಗುವ ತಂತ್ರಜ್ಞಾನವನ್ನು ಹೊಂದಿದೆ. 

ಧ್ವನಿಯ ಮೂಲಕ ವಿಂಡೋಸ್ 10 ನ್ನು ಚಾಲು ಮಾಡುವ, ಕ್ಷಿಪ್ರಗತಿಯ ಸುರಕ್ಷಿತ ಲಾಗ್ ಇನ್ ಗಳಿಗಾಗಿ ಫಿಂಗರ್ ಪ್ರಿಂಟ್ ರೀಡರ್ ಗಳನ್ನು ಹೊಂದಿರುವುದು ಈ ಲ್ಯಾಪ್ ಟಾಪ್ ನ ಮತ್ತೊಂದು ವಿಶೇಷವಾಗಿದೆ. ಭಾರತದಲ್ಲಿ ಇದರ ಬೆಲೆಯನ್ನು 59,999 ಕ್ಕೆ ನಿಗದಿಪಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com