ಪ್ಲೇಸ್ಟೋರ್'ನಲ್ಲಿ ಸದ್ದು ಮಾಡುತ್ತಿದೆ 'ರಿಮೂವ್ 'ಚೈನಾ ಆ್ಯಪ್ಸ್': 2 ವಾರಗಳಲ್ಲಿ 50 ಲಕ್ಷ ಜನರಿಂದ ಡೌನ್'ಲೋಡ್!

ಗಡಿ ಕ್ಯಾತೆ ಒಂದೆಡೆಯಾದರೆ, ಮತ್ತೊಂದೆಡೆ ವೈರಕ್ ಕಾಟ ಸೃಷ್ಟಿಸಿರುವ ಚೀನಾಗೆ ಆರ್ಥಿಕವಾಗಿ ಹೊಡೆತ ನೀಡಲು ಭಾರತೀಯರು ಮುಂದಾಗಿದ್ದು, ಇದರಂತೆ ಚೀನಾದ ವಸ್ತುಗಳ ಬಹಿಷ್ಕಾರ, ಚೀನಾ ಆ್ಯಪ್'ಗಳಿಗೆ ಗುಡ್ ಬಾಯ್ ಹೇಳುವ ಮುಂದಾದ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಡಿ ಕ್ಯಾತೆ ಒಂದೆಡೆಯಾದರೆ, ಮತ್ತೊಂದೆಡೆ ವೈರಕ್ ಕಾಟ ಸೃಷ್ಟಿಸಿರುವ ಚೀನಾಗೆ ಆರ್ಥಿಕವಾಗಿ ಹೊಡೆತ ನೀಡಲು ಭಾರತೀಯರು ಮುಂದಾಗಿದ್ದು, ಇದರಂತೆ ಚೀನಾದ ವಸ್ತುಗಳ ಬಹಿಷ್ಕಾರ, ಚೀನಾ ಆ್ಯಪ್'ಗಳಿಗೆ ಗುಡ್ ಬಾಯ್ ಹೇಳುವ ಮುಂದಾದ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಈ ಅಭಿಯಾನದ ಒಂದು ವಿಧಾನವೇ ರಿಮೂವ್ ಚೀನಾ ಆ್ಯಪ್ ಎಂಬ ಅಪ್ಲಿಕೇಶನ್ ಆಗಿದ್ದು, ಈ ವರೆಗೂ ಅಪ್ಲಿಕೇಶನ್'ನ್ನು ಕೇವಲ ಎರಡೇ ವಾರಗಳಲ್ಲಿ ಬರೋಬ್ಬರಿ 50 ಲಕ್ಷ ಜನರು ಡೌನ್ ಲೌಡ್ ಮಾಡಿಕೊಂಡಿದ್ದಾರೆ. 

ಈ ಹೊಸ ಆ್ಯಪ್ ಸ್ಮಾರ್ಟ್ ಫೋನ್'ಗಲಲ್ಲಿರುವ ಚೀನಾ ಮೂಲಕ ಆ್ಯಪ್ ಗಳನ್ನು ಗುರುತಿಸಿ ಅದನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೇ.17 ರಂದು ಅಧಿಕೃತವಾಗಿ ಪ್ಲೇಸ್ಟೋರ್'ನಲ್ಲಿ ಕಾಣಿಸಿಕೊಂಡ ಈ ಆ್ಯಪ್ ಬಿಡುಗಡೆಯಾದ ಕೇವಲ ಎರಡೇ ವಾರಗಳಲ್ಲಿ 50 ಲಕ್ಷ ಜನರು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ, ಬಳಕೆದಾರರಿಂದ ಆ ಆ್ಯಪ್'ಗೆ 4.9 ರೇಟಿಂಗ್ ಕೂಡ ಸಿಕ್ಕಿದೆ. ಅಲ್ಲದೆ. 1.89 ಲಕ್ಷ ಜನರು ಆ್ಯಪ್ ಕುರಿತು ತಮ್ಮ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಿದ್ದಾರೆ. 

ಒನ್ ಟಚ್ ಆ್ಯಪ್ ಲ್ಯಾಬ್ಸ್ ಎಂಬ ಜೈಪುರ ಮೂಲದ ಕಂಪನಿಯೊಂದು ಈ ಆ್ಯಪ್ ತಯಾರಿಸಿದೆ. ಗಮನಾರ್ಹ ವಿಚಾರವೆಂದರೆ ಬಳಕೆದಾರರು ಪ್ಲೇಸ್ಟೋರ್ ಮತ್ತು ಇತರ ಕಡೆಗಳಿಂದ ಇನ್ ಸ್ಟಾಲ್ ಮಾಡಿಕೊಂಡ ಆ್ಯಪ್ ಗಳನ್ನು ಮಾತ್ರ ಈ ಆ್ಯಪ್ ಗುರುತಿಸುತ್ತದೆ. ಇನ್ ಬಿಲ್ಟ್ ಆ್ಯಪ್ ಗಳನ್ನು ಪತ್ತೆಹಚ್ಚುವುದಿಲ್ಲ. 

ಆ್ಯಪ್ ಕುರಿತು ಕಂಪನಿ ಹೇಳಿಕೆ ನೀಡಿದ್ದು, ನಾವು ಶೈಕ್ಷಣಿಕ ಉದ್ದೇಶಕ್ಕಾಗಿ ಈ ಆ್ಯಪ್ ಅಭಿವೃದ್ಧಿ ಪಡಿಸಿದ್ದೇವೆಯೇ ಹೊರಡು ಬಲವಂತವಾಗಿ ಅಪ್ಲಿಕೇಶನ್ ಗಳನ್ನು ಅನ್ ಇನ್ ಸ್ಟಾಲ್ ಮಾಡುವ ಸಲುವಾಗಿ ಅಲ್ಲ. ಪ್ಲೇಸ್ಟೋರ್ ನಲ್ಲಿರುವ ಅಪ್ಲಿಕೇಶನ್ ಗಳು ಯಾವ ದೇಶಕ್ಕೆ ಸೇರಿವೆ ಎಂಬ ಮಾಹಿತಿಯನ್ನು ಬಳಕೆದಾರರಿಗೆ ತಿಳಿಸಲು ಇದು ಸಹಾಯಕವಾಗಿದೆ. ಇದು ಶಿಕ್ಷಣ ವಿಭಾಗಕ್ಕೆ ಸೇರಿದ್ದೇ ವಿನಃ ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com