ಸ್ಯಾಮ್ ಸಂಗ್ ಗ್ಯಾಲೆಕ್ಸಿ A31 ಭಾರತದ ಮಾರುಕಟ್ಟೆಯಲ್ಲಿ ಲಭ್ಯ: ಬೆಲೆ ಎಷ್ಟು ಗೊತ್ತೇ?

ಸ್ಮಾರ್ಟ್ ಫೋನ್ ಉತ್ಪಾದಕ ಸಂಸ್ಥೆ ಸ್ಯಾಮ್ ಸಂಗ್, ಭಾರತದ ಮಾರುಕಟ್ಟೆಯಲ್ಲಿ ಗ್ಯಾಲೆಕ್ಸಿ A31 ಆವೃತ್ತಿಯ ಮೊಬೈಲ್ ನ್ನು ಬಿಡುಗಡೆ ಮಾಡಿದೆ.
ಸ್ಯಾಮ್ ಸಂಗ್ ಗ್ಯಾಲೆಕ್ಸಿ A31
ಸ್ಯಾಮ್ ಸಂಗ್ ಗ್ಯಾಲೆಕ್ಸಿ A31

ಸ್ಮಾರ್ಟ್ ಫೋನ್ ಉತ್ಪಾದಕ ಸಂಸ್ಥೆ ಸ್ಯಾಮ್ ಸಂಗ್, ಭಾರತದ ಮಾರುಕಟ್ಟೆಯಲ್ಲಿ ಗ್ಯಾಲೆಕ್ಸಿ A31 ಆವೃತ್ತಿಯ ಮೊಬೈಲ್ ನ್ನು ಬಿಡುಗಡೆ ಮಾಡಿದೆ. 

6ಜಿಬಿ-128 ಜಿಬಿವರೆಗಿನ ಭಿನ್ನ ಮಾದರಿಗಳ ಮೊಬೈಲ್ ಫೋನ್ ಗಳು ಲಭ್ಯವಿದ್ದು, 48 ಎಂಪಿ ಕ್ವಾಡ್-ಕ್ಯಾಮರಾ, 5000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಈ ಮೊಬೈಲ್ ಹೊಂದಿದೆ. 

ಈ ವರ್ಷ ಬಿಡುಗಡೆಯಾಗುತ್ತಿರುವ ಮೂರನೇ ಗ್ಯಾಲೆಕ್ಸಿA ಸ್ಮಾರ್ಟ್ ಫೋನ್ ಇದಾಗಿದ್ದು, 6.4-ಇಂಚಿನ ಸೂಪರ್ ಅಮೋಲೆಡ್ ಇನ್ಫಿನಿಟಿ ಯು ಡಿಸ್ಪ್ಲೇ, ಪ್ರಿಸ್ಮ್ ಕ್ರಷ್ ನೀಲಿ, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ A31 ಲಭ್ಯವಿದೆ. 

ಎಲ್ಲಾ ರಿಟೆಲ್ ಸ್ಟೋರ್ಸ್ ಹಾಗೂ ಮುಂಚೂಣಿಯಲ್ಲಿರುವ ಆನ್ ಲೈನ್ ಪೋರ್ಟಲ್ ಗಳಲ್ಲಿ ಮೊಬೈಲ್ ಫೋನ್ ನ್ನು ಖರೀದಿಸಬಹುದಾಗಿದೆ. 

ಗ್ಯಾಲೆಕ್ಸಿ A51 ಕಡಿಮೆ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಫೋನ್ ಆಗಿತ್ತು. ಈಗ ಗ್ಯಾಲೆಕ್ಸಿ A31ನ್ನು ಬಿಡುಗಡೆ ಮಾಡುತ್ತಿರುವುದು ಸಂತಸ ಮೂಡಿಸಿದೆ ಎಂದು ಸ್ಯಾಮ್ ಸಂಗ್ ಇಂಡಿಯಾದ ಮೊಬೈಲ್ ಬ್ಯುಸ್ನೆಸ್ ವಿಭಾಗದ ನಿರ್ದೇಶಕ ಆದಿತ್ಯ ಬಬ್ಬರ್ ತಿಳಿಸಿದ್ದಾರೆ. 

A31 128GB ಆಂತರಿಕ ಮೆಮೊರಿ ಹೊಂದಿದ್ದು, ಮೆಮೊರಿಕಾರ್ಡ್ ಮೂಲಕ 512 ಜಿಬಿವರೆಗೆ ವಿಸ್ತರಿಸಬಹುದಾಗಿದೆ. ಗ್ಯಾಲೆಕ್ಸಿ A31 ಸ್ಪೋರ್ಟ್ಸ್ ಅತ್ಯಾಧುನಿಕ ಆಕ್ಟಾ-ಕೋರ್ ಪ್ರೊಸೆಸರ್ ನ ಹೊಂದಿದ್ದು 6ಜಿಬಿ ರ್ಯಾಮ್, ಕೃತಕ ಬುದ್ಧಿಮತ್ತೆಯ ಚಾಲಿತ ಗೇಮ್ ಬೂಸ್ಟರ್ ತಂತ್ರಜ್ಞಾನ ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ಇದರ ಬೆಲೆಯನ್ನು 21,999 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com