ಭಾರತೀಯ ಮಾರುಕಟ್ಟೆಗೆ ಐಡಿಯಾ ಪ್ಯಾಡ್ ಗೇಮಿಂಗ್ 3i ಲ್ಯಾಪ್ ಟಾಪ್ ಪರಿಚಯಿಸಿದ ಲೆನೆವೋ
ಭಾರತೀಯ ಮಾರುಕಟ್ಟೆಗೆ ಐಡಿಯಾ ಪ್ಯಾಡ್ ಗೇಮಿಂಗ್ 3i ಲ್ಯಾಪ್ ಟಾಪ್ ಪರಿಚಯಿಸಿದ ಲೆನೆವೋ

ಭಾರತೀಯ ಮಾರುಕಟ್ಟೆಗೆ ಐಡಿಯಾ ಪ್ಯಾಡ್ ಗೇಮಿಂಗ್ 3i ಲ್ಯಾಪ್ ಟಾಪ್ ಪರಿಚಯಿಸಿದ ಲೆನೆವೋ 

ಜಾಗತಿಕ ಕಂಪ್ಯೂಟರ್ ಉತ್ಪಾದಕ ಸಂಸ್ಥೆ ಲೆನೆವೋ ಜೂ.11 ರಂದು ಐಡಿಯಾ ಪ್ಯಾಡ್ ಗೇಮಿಂಗ್ 3I ಲ್ಯಾಪ್ ಟಾಪ್ ನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. 

ನವದೆಹಲಿ: ಜಾಗತಿಕ ಕಂಪ್ಯೂಟರ್ ಉತ್ಪಾದಕ ಸಂಸ್ಥೆ ಲೆನೆವೋ ಜೂ.11 ರಂದು ಐಡಿಯಾ ಪ್ಯಾಡ್ ಗೇಮಿಂಗ್ 3I ಲ್ಯಾಪ್ ಟಾಪ್ ನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. 

15 ಇಂಚ್ ಡಿಸ್ಪ್ಲೇ ಹೊಂದಿರುವ ಲ್ಯಾಪ್ ಟಾಪ್ ಪರ್ಫಾರ್ಮೆನ್ಸ್ ಮೋಡ್ ಸ್ವಿಚಿಂಗ್ ಗಾಗಿ ಲೆನೆವೋ ಕ್ಯೂ ಕಂಟ್ರೋಲ್ 3.0 ಹೊಂದಿದೆ. ಕ್ಯೂ ಕಂಟ್ರೋಲ್ ಮೂಲಕ ಬಳಕೆದಾರರು ಫ್ಯಾನ್ ಸ್ಪೀಡ್ ನ್ನು, ದಿನನಿತ್ಯದ ಬಳಕೆ, ಬ್ಯಾತರಿ ಲೈಫ್ ಸೇರಿದಂತೆ ಹಲವು ಅಗತ್ಯತೆಗಳಿಗೆ ತಕ್ಕಂತೆ ನಿಯಂತ್ರಿಸಬಹುದಾಗಿದೆ. 

ಭಾರತದ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಲ್ಯಾಪ್ ಟಾಪ್ ನ್ನು ತಯಾರಿಸಲಾಗಿದ್ದು, ಮುಖ್ಯವಾಹಿನಿಯ ಗೇಮಿಂಗ್ ಆಪ್ಷನ್ ನ್ನು ಐಡಿಯಾ ಪ್ಯಾಡ್ ಗೇಮಿಂಗ್ 3i ಮೂಲಕ ಪ್ರಾರಂಭಿಸುತ್ತಿದ್ದೇವೆ ಎಂದು ಲೆನೋವೋ ಇಂಡಿಯಾದ ನಿರ್ದೇಶಕ ಶೈಲೇಂದ್ರ ಕಟ್ಯಾಲ್ ಹೇಳಿದ್ದಾರೆ. 

ಇಂಟೆಲ್ i7 H- ಸರಣಿಯ ಮೊಬೈಲ್ ಪ್ರೊಸೆಸರ್ ನ್ನು ಹೊಂದಿರುವ 10 ನೇ ಜನರೇಷನ್ ಲ್ಯಾಪ್ ಟಾಪ್ ಇದಾಗಿದ್ದು, ಎನ್ ವಿಡಿಯಾ, ಜಿಇಫೋರ್ಸ್ ಜಿ ಟಿಎಕ್ಸ್ 1650 ಟಿಐ ಜಿಪಿಯು ಹೊಂದಿದ್ದು, ಒಮ್ಮೆ ಚಾರ್ಚ್ಜ್ ಮಾಡಿದರೆ 8 ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ. 
 

Related Stories

No stories found.

Advertisement

X
Kannada Prabha
www.kannadaprabha.com