ಲೆನೊವೋದಿಂದ ಹೊಸ ಲೀಜನ್ ಗೇಮಿಂಗ್ ಮೊಬೈಲ್ ಫೋನ್ ಜುಲೈ ವೇಳೆಗೆ

ಲೆನೋವೋ ಸಂಸ್ಥೆ ಜುಲೈ ತಿಂಗಳ ವೇಳೆಗೆ ಹೊಸ ಲೀಜನ್ ಗೇಮಿಂಗ್ ಲ್ಯಾಪ್ ಟಾಪ್ ಪರಿಚಯಿಸುವುದಾಗಿ ಘೋಷಿಸಿದೆ.
ಲೆನೊವೋ
ಲೆನೊವೋ

ಲೆನೋವೋ ಸಂಸ್ಥೆ ಜುಲೈ ತಿಂಗಳ ವೇಳೆಗೆ ಹೊಸ ಲೀಜನ್ ಗೇಮಿಂಗ್ ಲ್ಯಾಪ್ ಟಾಪ್ ಪರಿಚಯಿಸುವುದಾಗಿ ಘೋಷಿಸಿದೆ.

ಚೀನಾದ ಸಾಮಾಜಿಕ ಜಾಲತಾಣದಲ್ಲಿ ಈ ಘೋಷಿಸಿರುವ ಲೆನೋವೋ, ಟೀಸರ್ ಪೋಸ್ಟರ್ ಬಿಡುಗಡೆ ಮಾಡಿದೆ. ಲೀಜನ್ ಸ್ಮಾರ್ಟ್ ಫೋನ್ 5 ಜಿ ಕನೆಕ್ಟಿವಿಟಿ ಹೊಂದಿರಲಿದ್ದು, ಸ್ನ್ಯಾಪ್ ಡ್ರಾಗನ್ 865 ಎಸ್ಒಸಿಯೊಂದಿಗೆ ಬರಲಿದೆ.

90W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿರಲಿರುವ ಈ ಗೇಮಿಂಗ್ ಸ್ಮಾರ್ಟ್ ಫೋನ್, ಡಿಸ್ರಪ್ಟೀವ್ ಕೂಲಿಂಗ್ ಟೆಕ್ನಾಲಜಿಯನ್ನೂ ಹೊಂದಿರಲಿದೆ. ಸಂಪೂರ್ಣ ಹೆಚ್ ಡಿ+ (1,080*2,340 ಪಿಕ್ಸಲ್ಸ್ ) ಡಿಸ್ಪ್ಲೇ, 144ಹೆಚ್ ಝೆಡ್ ರಿಫ್ರೆಶ್ ರೇಟ್ ಹಾಗೂ 270 ಹೆಚ್ ಝೆಡ್ ಟಚಚ್ ಸ್ಯಾಂಪ್ಲಿಂಗ್ ರೇಟ್ ನ್ನು ಹೊಂದಿರಲಿದೆ.

ಗೇಮಿಂಗ್ ಸ್ಮಾರ್ಟ್ ಫೋನ್ ನಲ್ಲಿರಬಹುದಾದ ಮತ್ತಿತರ ವೈಶಿಷ್ಟ್ಯಗಳು.

  1. 64ಎಂಪಿ, 16 ಎಂಪಿ ಹಿಂಬದಿಯ ಕ್ಯಾಮರ, ಮುಂಭಾಗದಲ್ಲಿ 20 ಎಂಪಿ ಕ್ಯಾಮರ
  2. 5000 ಎಂಎಹೆಚ್ ಬ್ಯಾಟರಿ
  3. ಯುಎಸ್ ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com