ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಸ್ 20+, ಸ್ಯಾಮ್ ಸಂಗ್ ಗ್ಯಾಲೆಕ್ಸಿ ಬಡ್ಸ್+ ಬಿಟಿಎಸ್ ಆವೃತ್ತಿ ಬಿಡುಗಡೆ 

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಸ್ 20+, ಸ್ಯಾಮ್ ಸಂಗ್ ಗ್ಯಾಲೆಕ್ಸಿ ಬಡ್ಸ್+ ಬಿಟಿಎಸ್ ಆವೃತ್ತಿ ಅಧಿಕೃತವಾಗಿ ಜೂ.15 ರಂದು ಬಿಡುಗಡೆಯಾಗಿದೆ. 

ದಕ್ಷಿಣ ಕೊರೊಯಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಬಡ್ಸ್+ ಬಿಟಿಎಸ್ ಆವೃತ್ತಿಯ ಇಯರ್ ಬಡ್ಸ್ ನ್ನೂ ಇದೇ ವೇಳೇ ಮಾರುಕಟ್ಟೆಗೆ ಪರಿಚಯಿಸಿದೆ. ನೇರಳೆ ಬಣ್ಣದಲ್ಲಿ ಲಭ್ಯವಿದ್ದು ಕೆ-ಪಾಪ್ ಬಾಂಡ್ ನ್ನು ಹೊಂದಿರುವುದು ಈ ಮೂರು ಸಾಧನಗಳ ವಿಶೇಷತೆಯಾಗಿದೆ.  

ವಿಶೇಷ ಆವೃತ್ತಿಯ ಸ್ಮಾರ್ಟ್ ಫೋನ್ ಗಳ ಹಿಂಬದಿಯ ಪ್ಯಾನಲ್ ನೇರಳೆ ಬಣ್ಣದಲ್ಲಿದ್ದು, ಕೆಳಭಾಗದಲ್ಲಿ ಬಿಟಿಎಸ್ ಲೋಗೋ ಹೊಂದಿದೆ.  ಸ್ಯಾಮ್ ಸಂಗ್ ಗ್ಯಾಲೆಕ್ಸಿ ಬಡ್ಸ್+ ಬಿಟಿಎಸ್ ಆವೃತ್ತಿಯ ಚಾರ್ಜಿಂಗ್ ಉಪಕರಣ ಹಾಗೂ ಇಯರ್ ಬಡ್ಸ್ ನ ಬದಿಗಳನ್ನು ಸಹ ವಿಶಿಷ್ಟ ನೇರಳೆ ಬಣ್ಣದಲ್ಲಿ ವಿನ್ಯಾಸ ಮಾಡಲಾಗಿದ್ದು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಸಾಫ್ಟ್ ವೇರ್ ಬದಲಾವಣೆ, ವಿನ್ಯಾಸದ ಬಣ್ಣ, ವಿನ್ಯಾಸವನ್ನು ಹೊರತುಪಡಿಸಿದರೆ ಈ ಮೂರೂ ಸಾಧನಗಳ ಹಿಂದಿನ ಆವೃತ್ತಿಗಿಂತ ಇವುಗಳ ವಿಶೇಷಣಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. 

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಸ್20+ 5ಜಿ ಬಿಟಿಎಸ್ ಆವೃತ್ತಿ, ಸ್ಯಾಮ್ ಸಂಗ್ ಎಸ್ 20+ ಬಿಟಿಎಸ್ ಆವೃತ್ತಿ, ಸ್ಯಾಮ್ ಸಂಗ್ ಗ್ಯಾಲೆಕ್ಸಿ ಬಡ್ಸ್+ ಬಿಟಿಎಸ್ ಎಡಿಷನ್ ಗಳು ಸ್ಯಾಮ್ ಸಂಗ್.ಕಾಂ ನಲ್ಲಿ ಜೂ.19 ರಿಂದ ಲಭ್ಯವಿದ್ದು, ಸ್ಯಾಮ್ ಸಂಗ್ ಗ್ಯಾಲೆಕ್ಸಿ ಬಡ್ಸ್+ ಬಿಟಿಎಸ್ ಆವೃತ್ತಿಗೆ 15,2೦೦ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. 

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಸ್ 20+ ಬಿಟಿಎಸ್ ಆವೃತ್ತಿಯ ವಿಶೇಷತೆಗಳು 

  1. ಸ್ಯಾಮ್ ಸಂಗ್ ಎಕ್ಸಿನೋಸ್ 990 ಚಾಲಿತ, ಎ6.7 ಇಂಚಿನ ಇನ್ಫಿನಿಟಿ-O ಡೈನಮಿಕ್ AMOLED 2X ಡಿಸ್ಪ್ಲೆ
  2. 8ಜಿಬಿ ರ್ಯಾಮ್, ತ್ರಿವಳಿ ಹಿಂಬದಿ ಕ್ಯಾಮರಾಗಳು, ಸೆಲ್ಫಿ ಮತ್ತು ವಿಡಿಯೋ ಕಾಲಿಂಗ್ ಗೆ 10ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮರ 
  3. 4,500 ಎಂಎಹೆಚ್ ಬ್ಯಾಟರಿ 
  4. ಕೇವಲ ಮೂರು ನಿಮಿಷ ಚಾರ್ಜ್ ಮಾಡಿದರೆ ಒಂದು ಗಂಟೆ ಬಳಕೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com