ಭಾರತದ ಮಾರುಕಟ್ಟೆಗೆ 'Edge+' ಮೊಬೈಲ್ ಪರಿಚಯಿಸಿದ ಮೊಟೊರೋಲಾ: ಬೆಲೆ ಎಷ್ಟು ಗೊತ್ತೇ?
ಭಾರತದ ಮಾರುಕಟ್ಟೆಗೆ 'Edge+' ಮೊಬೈಲ್ ಪರಿಚಯಿಸಿದ ಮೊಟೊರೋಲಾ: ಬೆಲೆ ಎಷ್ಟು ಗೊತ್ತೇ?

ಭಾರತದ ಮಾರುಕಟ್ಟೆಗೆ ಮೊಟೊರೋಲಾ Edge+ ಮೊಬೈಲ್ ಬಿಡುಗಡೆ: ವಿಶೇಷತೆ, ಬೆಲೆ ವಿವರ ಇಲ್ಲಿದೆ!

ಮೋಟೊರೋಲಾ ಸಂಸ್ಥೆ ಸ್ಮಾರ್ಟ್ ಫೋನ್ ಎಡ್ಜ್+ (Edge+) ನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, 5 ಜಿ, ಅತ್ಯುತ್ಕೃಷ್ಟ ಡಿಸ್ಪ್ಲೇ ಹೊಂದಿದೆ. 

ಮೋಟೊರೋಲಾ ಸಂಸ್ಥೆ ಸ್ಮಾರ್ಟ್ ಫೋನ್ ಎಡ್ಜ್+ (Edge+) ನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, 5 ಜಿ, ಅತ್ಯುತ್ಕೃಷ್ಟ ಡಿಸ್ಪ್ಲೇ ಹೊಂದಿದೆ. 

ಎರಡು ಬಣ್ಣಗಳಲ್ಲಿ ಈ ಫೋನ್ ಲಭ್ಯವಾಗಲಿದ್ದು, ಫ್ಲಿಪ್ ಕಾರ್ಟ್ ನಲ್ಲಿ ಬುಕ್ ಮಾಡಬಹುದಾಗಿದೆ. ಮೇ.26 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.  ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವವರಿಗೆ 7,500 ಕ್ಯಾಶ್ ಬ್ಯಾಕ್ ಸಿಗಲಿದೆ. 

ಮೊಬೈಲ್ ನ ಇನ್ನಿತರ ವೈಶಿಷ್ಟ್ಯಗಳು ಇಂತಿವೆ. 

6.7 ಇಂಚ್ ಹೆಚ್ ಡಿ+ ಪರದೆ, 90Hz ರಿಫ್ರೆಶ್ ರೇಟ್ ನೊಂದಿಗೆ Endless Edge ಪರದೆ, HDR10+ ಸಪೋರ್ಟ್

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865  Soc ನಿಂದ ಚಾಲಿತ, ಅಡ್ರಿನೊ 650 ಜಿಪಿಯು, 12 ಜಿಪಿ ಎಲ್ ಪಿಡಿಡಿಆರ್ 5 ರ್ಯಾಮ್, 256 ಜಿಪಿಯಷ್ಟು ಯುಎಫ್ಎಸ್ 3.0 ಆಂತರಿಕ ಸ್ಟೋರೇಜ್

5 ಜಿ ಆಂಟೆನಾ ಅರೇ, 4ಜಿಪಿಪಿಎಸ್ ಸ್ಪೀಡ್, 108 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ವಾಡ್ ಹಿಂದಿನ ಕ್ಯಾಮೆರಾ, ಮತ್ತೊಂದು ಕ್ಯಾಮರಾ 117 ಡಿಗ್ರಿ ವ್ಯೂ ನ ಅಲ್ಟ್ರಾ ವೈಡ್ ಆಂಗಲ್ ಶೂಟರ್ 16 ಮೆಗಾ ಪಿಕ್ಸಲ್ ನದ್ದಾಗಿದೆ. 

8ಎಂಪಿ ಟೆಲಿಫೋಟೋ ಶೂಟರ್ ಸಹ ಇದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ (ಒಐಎಸ್) ಟೈಮ್ ಆಫ್ ಫ್ಲೈಟ್ ನ ಸೆನ್ಸರ್, 25 ಎಂಪಿ ಸೆಲ್ಫಿ ಸ್ನ್ಯಾಪರ್ ಸಹ ಲಭ್ಯವಿದೆ. 

ಆಂಡ್ರಾಯ್ಡ್ 10 ಒಎಸ್ ಮೂಲಕ ಚಾಲನೆಯಾಗಲ್ದಿದು, 2 ಆಂಡ್ರಾಯ್ಡ್ ಒಎಸ್ ಅಪ್ಡೇಟ್ ಗಳು ಲಭ್ಯವಿದ್ದು, 5,000 ಎಂಎಹೆಚ್ ಬ್ಯಾಟರಿ 15W ನ ವೈರ್ಲೆಸ್ ಚಾರ್ಜಿಂಗ್ ಲಭ್ಯವಿರಲಿದೆ. ಭಾರತದ ಮಾರುಕಟ್ಟೆಯಲ್ಲಿ ಇದರ ಬೆಲೆಯನ್ನು 74,999 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com