ಭಾರತದ ಮಾರುಕಟ್ಟೆಗೆ ಕೈಗೆಟುಕುವ ದರದ ಪೋಕೋ ಸಿ3 ಸ್ಮಾರ್ಟ್ ಫೋನ್ ಬಿಡುಗಡೆ

ಶಿಯೊಮಿ ಬ್ರ್ಯಾಂಡ್‌ನಿಂದ ಪ್ರತ್ಯೇಕಗೊಂಡಿರುವ ಪೋಕೋ ಸಂಸ್ಥೆ ಭಾರತದ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಸಿ3 ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದೆ.

ಅ.16 ರಿಂದ ಪ್ರಾರಂಭವಾಗುವ ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ಸೇಲ್ ಅವಧಿಯಲ್ಲಿ ಪೋಕ್ ಸಿ3 ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು ಲಭ್ಯವಿದೆ.

3ಜಿಬಿ-32 ಜಿಬಿ ಹಾಗೂ 4ಜಿಬಿ-64 ಜಿಬಿ ಸಾಮರ್ಥ್ಯದ ಆವೃತ್ತಿಯ ಮೊಬೈಲ್ ಗಳು ಪ್ರಾರಂಭಿಕವಾಗಿ 7,499 ರೂಪಾಯಿ ಹಾಗೂ 8,999 ರೂಪಾಯಿಗಳಿಗೆ ಲಭ್ಯವಿದೆ.

ಎಸ್ ಬಿಐ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಇಎಂಐ ವಹಿವಾಟುಗಳ ಮೂಲಕ ಗ್ರಾಹಕರಿಗೆ ಶೇ.10 ರಷ್ಟು ರಿಯಾಯಿತಿ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. 

6.53 ಇಂಚಿನ ಹೆಚ್ ಡಿ+ ಡಿಸ್ಪ್ಲೆ 20:9 ಆಸ್ಪೆಕ್ಟ್ ರೇಷಿಯೋ 1600×720 ರೆಸೆಲ್ಯೂಷನ್ ನ್ನು ಈ ಮೊಬೈಲ್ ಹೊಂದಿದೆ.

ಗ್ರಾಹಕರು ದೀರ್ಘಾವಧಿವರೆಗೂ ಮೊಬೈಲ್ ಬಳಕೆ ಮಾಡುವುದಕ್ಕೆ ಟಿಯುವಿ ರೈನ್‌ಲ್ಯಾಂಡ್ ನಿಂದ ಪ್ರಮಾಣಿಕೃತ ಡಿಸ್ಪ್ಲೇ ರೀಡಿಂಗ್ ಮೋಡ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ಮೀಡಿಯಾ ಟೆಕ್ ಹೀಲಿಯೊ ಜಿ35 8 ಕೋರ್ ಪ್ರೊಸೆಸರ್, 2.3ಗಿಗಾಹರ್ಟ್ಸ್ ವರೆಗಿನ ಕಾರ್ಟೆಕ್ಸ್-A53 ಕೋರ್ಸ್ ನೊಂದಿಗೆ ಈ ಮೊಬೈಲ್ ನ್ನು ತಯಾರಿಸಲಾಗಿದೆ..

ಸಿ3 ಟ್ರಿಪಲ್ ಕ್ಯಾಮರಾ 13 ಎಂಪಿ ಪ್ರೈಮರಿ ಸೆನ್ಸಾರ್, 2 ಎಂಪಿ ಮ್ಯಾಕ್ರೋ ಸೆನ್ಸಾರ್ ಹಾಗೂ 2 ಎಂಪಿ ಡೆಪ್ತ್ ಸೆನ್ಸಾರ್ ನ್ನು ಹೊಂದಿದ್ದು 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯವನ್ನು ಈ ಮೊಬೈಲ್ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com