ಸ್ಯಾಮ್ ಸಂಗ್ A42 5G ಸ್ಮಾರ್ಟ್ ಫೋನ್ ಬಿಡುಗಡೆ: ಹೀಗಿದೆ ವಿವರ

ಸ್ಮಾರ್ಟ್ ಫೋನ್ ಅಗ್ರಗಣ್ಯ ಸಂಸ್ಥೆ ಸ್ಯಾಮ್ ಸಂಗ್ 5 ಜಿ ಸ್ಮಾರ್ಟ್ ಫೋನ್ ಆವೃತ್ತಿಯಲ್ಲಿ A42 ಮಾದರಿಯನ್ನು ಲೋಕಾರ್ಪಣೆಗೊಳಿಸಿದೆ. 

A ಸರಣಿಯಲ್ಲಿ 5 ಜಿ ಕನೆಕ್ಟಿವಿಟಿಯನ್ನು ಮುಂದುವರೆಸಿದ್ದು, ಮಲ್ಟಿ ರೋಲ್ ಕ್ವಾಡ್ ಕ್ಯಾಮರಾ, 5000 ಎಂಎಎಚ್ ದೀರ್ಘಾವಧಿ ಬ್ಯಾಟರಿ, ವೇಗಗತಿಯ ಚಾರ್ಜಿಂಗ್ ಸಾಮರ್ಥ್ಯ ಇನ್ಫಿನಿಟಿ-ಯು ಡಿಸ್ಪ್ಲೇ ಹಾಗೂ ಗ್ಯಾಲೆಕ್ಸಿ A ಸರಣಿಯಲ್ಲಿ ಗ್ರಾಹಕರು ಅಪೇಕ್ಷಿಸುವ ಸೌಲಭ್ಯಗಳಿವೆ ಎಂದು ಸಂಸ್ಥೆ ತಿಳಿಸಿದೆ.

ಬ್ರಿಟನ್ ನಲ್ಲಿ ನವೆಂಬರ್ 6 ರಿಂದ ಗ್ಯಾಲೆಕ್ಸಿ A42 5ಜಿ ಲಭ್ಯವಿದ್ದು, 349 ಪೌಂಡ್ ಗಳು (33,000 ರೂಪಾಯಿ) ಬೆಲೆ ನಿಗದಿಪಡಿಸಲಾಗಿದೆ.

128 ಜಿಬಿ ಆಂತರಿಕ ಸ್ಟೋರೇಜ್, 4 ಜಿಬಿ RAM 1 ಟಿಬಿ ವರೆಗಿನ ಮೈಕ್ರೋ ಸಾಫ್ಟ್ ಎಸ್ ಡಿ ಸಪೋರ್ಟ್ ನ್ನು ಹೊಂದಿದೆ. 48 ಮೆಗಾ ಪಿಕ್ಸಲ್ ಕ್ಯಾಮರಾ 8 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಕ್ಯಾಮರಾ 5 ಮೆಗಾ ಪಿಕ್ಸಲ್ ಮ್ಯಾಕ್ರೋ ಕ್ಯಾಮರಾ ಹಾಗೂ 5 ಮೆಗಾ ಪಿಕ್ಸಲ್ ಡೆಪ್ತ್ ಕ್ಯಾಮರ, 20 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮರಾಗಳಿರುವುದು ಈ ಮೊಬೈಲ್ ನ ವೈಶಿಷ್ಟ್ಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com