ಮೀಡಿಯಾ ಟೆಕ್ ಹೆಲಿಯೊ G80 ಆಕ್ಟಾಕೋರ್ ಪ್ರೊಸೆಸರ್ ನೊಂದಿಗೆ ಎಂ2 ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತೇ?

ಚೀನಾದ ಸ್ಮಾರ್ಟ್ ಫೋನ್ ತಯಾರಕ ಶಿಯೋಮಿಯ ಸಬ್‌ಬ್ರಾಂಡ್‌ ಪೊಕೊ ಅತ್ಯಾಧುನಿಕ ಸ್ಮಾರ್ಟ್ ಫೋನ್ ಎಂ2 ನ್ನು ಬಿಡುಗಡೆ ಮಾಡಿದೆ. 

Published: 08th September 2020 05:49 PM  |   Last Updated: 08th September 2020 05:53 PM   |  A+A-


6GB Poco M2 with MediaTek Helio G80 chip in India

ಮೀಡಿಯಾ ಟೆಕ್ ಹೆಲಿಯೊ G80 ಆಕ್ಟಾಕೋರ್ ಪ್ರೊಸೆಸರ್ ನೊಂದಿಗೆ ಎಂ2 ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತೇ?

Posted By : Srinivas Rao BV
Source : The New Indian Express

ನವದೆಹಲಿ: ಚೀನಾದ ಸ್ಮಾರ್ಟ್ ಫೋನ್ ತಯಾರಕ ಶಿಯೋಮಿಯ ಸಬ್‌ಬ್ರಾಂಡ್‌ ಪೊಕೊ ಅತ್ಯಾಧುನಿಕ ಸ್ಮಾರ್ಟ್ ಫೋನ್ ಎಂ2 ನ್ನು ಬಿಡುಗಡೆ ಮಾಡಿದೆ. 

ಮೀಡಿಯಾ ಟೆಕ್ ಹೆಲಿಯೊ G80 ಆಕ್ಟಾಕೋರ್ ಪ್ರೊಸೆಸರ್, 6 ಜಿಬಿ ರ್ಯಾಮ್ ನ್ನು ಹೊಂದಿರುವ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, 64 ಜಿಬಿ ಸ್ಟೋರೇಜ್ ಸಾಮರ್ಥ್ಯದ ಮೊಬೈಲ್ ನ ಬೆಲೆಯನ್ನು 10,999 ಕ್ಕೆ ನಿಗದಿಪಡಿಸಲಾಗಿದೆ. 

6 ಜಿಬಿ ರ್ಯಾಮ್ ಹಾಗೂ 128 ಜಿಬಿ ಆಂತರಿಕ ಸ್ಟೋರೇಜ್ ನ ಬೆಲೆ 12,499 ಕ್ಕೆ ನಿಗದಿಪಡಿಸಲಾಗಿದೆ. 5000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯವಿರುವ ಪೊಕೊ ಎಂ2  ಸೆ.15 ರಿಂದ ಮಾರುಕಟ್ಟೆಗಳಲ್ಲಿ ಲಭ್ಯವಿರಲಿದ್ದು, ನೀಲಿ, ಪಿಚ್ ಬ್ಲಾಕ್, ಬ್ರಿಕ್ ರೆಡ್ ಬಣ್ಣಗಳಲ್ಲಿ ಈ ಫೋನ್ ಲಭ್ಯವಿರಲಿದೆ. 

6.53 ಇಂಚಿನ ಹೆಚ್ ಡಿ+ ಡಿಸ್ಪ್ಲೇ, 13 ಎಂಪಿ ಪ್ರೈಮರಿ ಸೆನ್ಸಾರ್, 8 ಎಂಪಿ ಅಲ್ಟ್ರಾ-ವೈಡ್ ಸೆನ್ಸರ್, 5 ಎಂಪಿ ಮಾಕ್ರೋ ಸೆನ್ಸಾರ್ ಹಾಗೂ 2ಎಂಪಿ ಡೆಪ್ತ್ ಸೆನ್ಸಾರ್ ಹೊಂದಿದ್ದು, 118 ಡಿಗ್ರಿ ಫೀಲ್ಡ್ ವ್ಯೂ ಹೊಂದಿರುವ 8ಎಂಪಿ ಅಲ್ಟ್ರಾ ವೈಡ್ ಕ್ಯಾಮರಾ ಅತ್ಯುತ್ತಮ ಕ್ಯಾಮರಾ, 8 ಎಂಪಿ ಸೆಲ್ಫಿ ಕ್ಯಾಮರಾ, ನೈಟ್ ಮೋಡ್ ನ್ನು ಹೊಂದಿದೆ.

Stay up to date on all the latest ಗ್ಯಾಡ್ಜೆಟ್ಸ್ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp