ಫೇಸ್ ಬುಕ್ ಸ್ವಯಂ ಚಾಲಿತ ವಿಡಿಯೋದಿಂದ ಉಂಟಾಗುವ ಕಿರಿಕಿರಿ ತಪ್ಪಿಸಿಕೊಳ್ಳಲು ಹೀಗೆ ಮಾಡಿ...

ಡಿಜಿಟಲ್ ಮಾರ್ಕೆಟಿಂಗ್ ಯುಗದಲ್ಲಿ ಗ್ರಾಹಕರನ್ನು ಸೆಳೆಯುವುದಕ್ಕೆ ವಿಧವಿಧವಾದ ಪ್ರಯೋಗಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂ ಚಾಲಿತವಾಗಿ ಪ್ರಕಟವಾಗುವ ಜಾಹಿರಾತು ವಿಡಿಯೋಗಳು ಸಹ ಇವುಗಳ ಪೈಕಿ ಪ್ರಮುಖವಾದದ್ದು. 
ಫೇಸ್ ಬುಕ್
ಫೇಸ್ ಬುಕ್

ಡಿಜಿಟಲ್ ಮಾರ್ಕೆಟಿಂಗ್ ಯುಗದಲ್ಲಿ ಗ್ರಾಹಕರನ್ನು ಸೆಳೆಯುವುದಕ್ಕೆ ವಿಧವಿಧವಾದ ಪ್ರಯೋಗಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂ ಚಾಲಿತವಾಗಿ ಪ್ರಕಟವಾಗುವ ಜಾಹಿರಾತು ವಿಡಿಯೋಗಳು ಸಹ ಇವುಗಳ ಪೈಕಿ ಪ್ರಮುಖವಾದದ್ದು. 

ಕೆಲವೊಂದಷ್ಟು ಜಾಹಿರಾತುಗಳು ಗ್ರಾಹಕರ ಮನಸೆಳೆದರೆ ಮತ್ತೆ ಕೆಲವು ಅನಗತ್ಯ ಜಾಹಿರಾತು  ಕಿರಿಕಿರಿ ಉಂಟು ಮಾಡುತ್ತವೆ. ಫೇಸ್ ಬುಕ್ ನಲ್ಲಿ ಸ್ವಯಂ ಚಾಲಿತವಾಗಿ ಪ್ರಕಟಗೊಳ್ಳುವ ಜಾಹಿರಾತು ಅಥವಾ ಇನ್ನಿತರ ವಿಡಿಯೋಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮಾರ್ಗವೊಂದಿದೆ. 

ವಿಡಿಯೋಗಳು ಸ್ವಯಂ ಚಾಲಿತವಾಗಿ ಪ್ಲೇ ಆಗುವುದನ್ನು ತಡೆಗಟ್ಟಲು ಹೀಗೆ ಮಾಡಿ 

ಹೊಸ ಫೇಸ್ ಬುಕ್ ಆವೃತ್ತಿಯನ್ನು ಬಳಕೆ ಮಾಡುತ್ತಿರುವವರು ಫೇಸ್ ಬುಕ್ ನ ಬಲ ಭಾಗದ ಮೇಲೆ ಕ್ಲಿಕ್ ಮಾಡಿ ಸೆಟ್ಟಿಂಗ್ಸ್, ಪ್ರೈವೆಸಿಯನ್ನು ಆಯ್ಕೆ ಮಾಡಿ
 

  • ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ 
  • ಮೆನು ಬಾರ್ ನಲ್ಲಿ ಎಡಕ್ಕೆ ವಿಡಿಯೋಸ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
  • ಆಟೋ ಪ್ಲೇ ವಿಡಿಯೋಸ್ ಎಂಬ ಆಯ್ಕೆಯ ಪಕ್ಕದಲ್ಲಿ ಕಾಣುವ ಡ್ರಾಪ್ ಡೌನ್ ಮೆನುನ್ನು ಕ್ಲಿಕ್ ಮಾಡಿ, ಇಲ್ಲಿ ಆಫ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ ಸ್ವಯಂ ಚಾಲಿತ ವಿಡಿಯೋದಿಂದ ಮುಕ್ತಿಪಡೆಯಬಹುದಾಗಿದೆ. 
  • ಆಂಡ್ರಾಯ್ಡ್ ಮೊಬೈಲ್ ನಲ್ಲಿ ಇದನ್ನು ಹೀಗೆ ಮಾಡಬಹುದು
  • ಫೇಸ್ ಬುಕ್ ನ ಬಲ ಭಾಗದ ಮೇಲೆ ಹ್ಯಾಂಬರ್ಗರ್ ಮೆನುನ್ನು ಸೆಲೆಕ್ಟ್ ಮಾಡಿ 
  • ಸೆಟ್ಟಿಂಗ್ಸ್ ಹಾಗೂ ಪ್ರೈವೆಸಿ>ಸೆಟ್ಟಿಂಗ್ಸ್ ಆಯ್ಕೆ 

ಸ್ಕ್ರಾಲ್ ಮಾಡಿ ಕೆಳಗೆ ಬಂದರೆ ಮೀಡಿಯಾ ಹಾಗೂ ಕಾಂಟ್ಯಾಕ್ಟ್ಸ್ ಮೇಲೆ ಕ್ಲಿಕ್ ಮಾಡಿದರೆ ಆಟೋ ಪ್ಲೇ ಕಾಣಲಿದೆ. ನಂತರ ಮೊಬೈಲ್ ಡಾಟಾ ಹಾಗೂ ವೈಫೈ ಕನೆಕ್ಷನ್ ಗಳನ್ನು ಆಯ್ಕೆ ಮಾಡಿ ವೈಫೈ ಕನೆಕ್ಷನ್ಸ್ ಓನ್ಲಿ ಎಂಬ ಆಯ್ಕೆ ಮಾಡಿ ನೆವರ್ ಆಟೋಪ್ಲೇ ವಿಡಿಯೋಸ್ ನ್ನು ಖಚಿತಪಡಿಸಿದೆ. ಈ ರೀತಿ ಮಾಡಿದರೆ ಫೇಸ್ ಬುಕ್ ಸ್ವಯಂ ಚಾಲಿತ ವಿಡಿಯೋದಿಂದ ಉಂಟಾಗುವ ಕಿರಿಕಿರಿ ತಪ್ಪಿಸಿಕೊಳ್ಳಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com